ರಾಯಚೂರು: ಟ್ರಕ್ ವಾಹನ(ಮಿನಿ ಲಾರಿ) ಮತ್ತು ಬೈಕ್ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ ಮೂರು ಜನ ಯುವಕರು ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ನಸುಕಿನ ಜಾವ 1.30ರ ಸುಮಾರಿಗೆ ನಗರದ ಬಸವೇಶ್ವರ ವೃತ್ತದಲ್ಲಿ ಜರುಗಿದೆ.
ಮಹ್ಮದ ಅಲಿ ಪಾಷಾ (24) ನೂರ ಮಹ್ಮದ್ (19) ಹಾಗೂ ಫಯಾಜ್(26) ಮೃತ ಪಟ್ಟವರಾಗಿದ್ದು, ಇವರೆಲ್ಲರೂ ನಗರದ ಸುಖಣಿ ಕಾಲೋನಿ ಬಡಾವಣೆಯ ನಿವಾಸಿಗಳು ಎಂದು ತಿಳಿದು ಬಂದಿದೆ.
ಮೂವರು ಯುವಕರು ಒಂದೇ ಬೈಕ್ನಲ್ಲಿ ಯರಗೇರಾ ರಸ್ತೆಯಲ್ಲಿ ನಡೆಯುತ್ತಿರುವ ಕ್ರಿಕೇಟ್ ಟೂರ್ನಮೆಂಟ್ ನೋಡಿ ಮನೆಗೆ ಹಿಂತಿರುಗುವಾಗ ಹಿಂಬದಿಯಿಂದ ವೇಗವಾಗಿ ಬಂದ ಗೂಡ್ಸ್ ಟ್ರಕ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂರು ಜನ ಸ್ಥಳದಲ್ಲಿಯೇ ಮೃತಪಟ್ಡಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಪೋಲಿಸರು ಸ್ಥಳ ಕ್ಕೆ ಆಗಮಿಸಿ ಮೃತ ಪಟ್ಟವರನ್ನು ಮರಣೋತ್ತರ ಪರಿಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ಕಳಿಸಲಾಯಿತ್ತು.
ಅಹ್ಮದಬಾದನಿಂದ ಚೆನೈ ಗೆ ಈ ಟ್ರಕ ವಾಹನ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಟ್ರಕ್ ವಾಹನ ಚಾಲಕನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ನಗರದ ಟ್ರಾಫಿಕ ಪೋಲಿಸ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.