LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Local News

2026 ರ ಸ್ವಾಗತಕ್ಕೆ ಐತಿಹಾಸಿಕ ಹಂಪಿ ಕಡೆ ಮುಖ ಮಾಡಿದ ಪ್ರವಾಸಿಗರು…

ಹೊಸಪೇಟೆ: 2025 ಅಸ್ತಮಿಸಿ, 2026 ಉದಯಿಸುವ ಹೊಸ್ತಿಲಲ್ಲಿ.. ಐತಿಹಾಸಿಕ ಗತವೈಭವ ಸಾರುವ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ವಿಶ್ವ ಪಾರಂಪರಿಕ ತಾಣ ಹಂಪಿಗೆ ಪ್ರವಾಸಿಗರ ದಂಡೇ ಬರುತ್ತಿದೆ. ನೂತನ ವμರ್Áಚರಣೆಯ ಸಂಭ್ರಮಕ್ಕೆ ಹೇಳಿ ಮಾಡಿಸಿದ ತಾಣವೆಂದರೇ ಅದು ಹಂಪಿ. ವಿದೇಶಿ ಹಾಗೂ ದೇಶೀ ಪ್ರವಾಸಿಗರು ಹಂಪಿಯ ಸ್ಮಾರಕಗಳ ವೈಭವದೊಂದಿಗೆ ಗುಡ್ಡ, ಬೆಟ್ಟಗಳಲ್ಲಿ ಹೊಸ ವರ್ಷದ ಸೂರ್ಯೋದಯ, ಸೂರ್ಯಾಸ್ತ ವೀಕ್ಷಿಸಲು ಕಾತುರರಾಗಿದ್ದಾರೆ. ಇಲ್ಲಿನ ಹೋಟೆಲ್‍ಗಳು ಸಂಪೂರ್ಣ ಭರ್ತಿಯಾಗಿದ್ದು, ಪ್ರವಾಸಿಗರು ಹೊಸಪೇಟೆ ಸೇರಿದಂತೆ ಹತ್ತಿರದ ನಗರಗಳಲ್ಲಿ ಹೊಟೆಲ್‍ಗಳ ಬುಕ್ಕಿಂಗ್ ಜೋರಾಗಿ ನಡೆದಿದೆ.
ನೂತನ Àವರ್ಷದ ಹಿನ್ನೆಲೆಯಲ್ಲಿ ಹಂಪಿಗೆ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಇಲ್ಲಿಗೆ ಆಗಮಿಸಿರುವ ಪ್ರವಾಸಿಗರು ಹಂಪಿಯ ವಿರೂಪಾಕ್ಷೇಶ್ವರ ದೇಗುಲ, ಕಡಲೆಕಾಳು ಗಣಪ, ಸಾಸಿವೆಕಾಳು ಗಣೇಶ, ಎದುರು ಬಸವಣ್ಣ, ಲೋಟಸ್ ಮಹಲ್, ಆನೆಸಾಲು ಮಂಟಪ, ರಾಣಿಯರ ಸ್ನಾನಗೃಹ, ಮಂಟಪಗಳು, ಮಹಾನವಮಿ ದಿಬ್ಬ, ಕಲ್ಲಿನತೇರು, ವಿಜಯ ವಿಠ್ಠಲ ದೇಗುಲ ಸೇರಿದಂತೆ ನಾನಾ ಸ್ಮಾರಕಗಳನ್ನು ವೀಕ್ಷಿಸಿ, ಹೊಸ ವರ್ಷವನ್ನು ಸ್ವಾಗತಿಸಲು ಸಿದ್ದರಾಗುತ್ತಿದ್ದಾರೆ.


ಹಂಪಿಯ ಸ್ಮಾರಕಗಳ ವೈಭವದ ವೀಕ್ಷಣೆಯೊಂದಿಗೆ ಹೊಸ ವರ್ಷದ ಸಂಭ್ರಮವನ್ನು ಸ್ಮರಣೀಯಗೊಳಿಸಲು ನಿರ್ಧರಿಸಿರುವ ಪ್ರವಾಸಿಗರು ಇಲ್ಲಿನ ಗುಡ್ಡ, ಬೆಟ್ಟಗಳು ಮತ್ತು ಎತ್ತರದ ಪ್ರದೇಶದಲ್ಲಿ ಹೊಸ ವರ್ಷದ ಮೊದಲ ಸೂರ್ಯೋದಯ ಹಾಗೂ 2025 ರ ವರ್ಷದ ಕೊನೆಯ ಸೂರ್ಯಾಸ್ತ ಕಂಡು ಸಂಭ್ರಮಿಸಲು ಕುತೂಹಲದಿಂದ ಕಾಯುತ್ತಿದ್ದಾರೆ. ಇದಕ್ಕಾಗಿ ಹಂಪಿಯ ಸುತ್ತಲಿನ ಗ್ರಾಮಗಳಲ್ಲಿರುವ ರೆಸಾರ್ಟ್‍ಗಳಲ್ಲಿ ತಂಗಿರುವ ಪ್ರವಾಸಿಗರು ಹೊಸ ವರ್ಷಕ್ಕೆ ಹಂಪಿಯ ಮಾತಂಗ ಪರ್ವತ, ಸಾಸಿವೆಕಾಳು ಗಣಪತಿ ದೇವಾಲಯ, ಹೇಮಕೂಟ, ಮಹಾನವಮಿ ದಿಬ್ಬ, ಮಾಲ್ಯವಂತ ದೇಗುಲ ಸೇರಿ ಎತ್ತರದ ಕಲ್ಲುಗಳ ಮೇಲೆ ಈ ಕ್ಷಣ ಕಾಣಲು ಕಾಯುತ್ತಿದ್ದಾರೆ.
ಹೋಟೆಲ್‍ಗಳು ಫುಲ್:
ಹೊಸ ವರ್ಷದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿರುವುದರಿಂದ ಹೊಸಪೇಟೆ ನಗರ ಹಾಗೂ ಹಂಪಿ ಸುತ್ತಲಿನ ಹೋಟೆಲ್‍ಗಳಲ್ಲಿ ರೂಂಗಳು ಫುಲ್ ಆಗಿವೆ. ಹಂಪಿ, ಹಂಪಿ ಜೂ, ತುಂಗಭದ್ರಾ ಜಲಾಶಯ ಸೇರಿ ನಾನಾ ಪ್ರಮುಖ ಪ್ರವಾಸಿ ತಾಣಗಳಿಗೆ ಹೆಚ್ಚಿನ ಪ್ರವಾಸಿಗರ ಆಗಮನದಿಂದ ಹೋಟೆಲ್‍ಗಳಲ್ಲಿ ರೂಂ ಸಿಗುತ್ತಿಲ್ಲ. ಇದರಿಂದ ಪ್ರವಾಸಿಗರು ಪಕ್ಕದ ಬಳ್ಳಾರಿ, ಕೊಪ್ಪಳ ಸೇರಿ ಮತ್ತಿತರ ನಗರಗಳತ್ತ ಮುಖಮಾಡಿದ್ದಾರೆ. ರೂಂಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ದರವೂ ದುಪ್ಪಟ್ಟಾಗಿದೆ ಎಂಬ ದೂರು ಕೇಳಿ ಬರುತ್ತಿದೆ.
ಪೊಲೀಸರಿಂದ ಬಿಗಿ ಭದ್ರತೆ
ಹೊಸ ವರ್ಷದ ಸಂಭ್ರಮಾಚರಣೆಗೆ ಹಂಪಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ಕಾರಣ ಮತ್ತು ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಬಿಗಿ ಭದ್ರತೆಗೆ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

 

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ