ರಾಯಚೂರು : ಕಲ್ಪವೃಕ್ಷ ಕಾಮಧೇನು ಶ್ರಿಗುರು ರಾಘವೇಂದ್ರ ಸ್ವಾಮಿಗಳವರ ವರ್ಧಂತಿ ಉತ್ಸವ ಮಂತ್ರಾಲಯ ಮಠದಲ್ಲಿ ಅದ್ದೂರಿಯಾಗಿ ಜರುಗಿತ್ತು. ರಾಯರ ವರ್ಧಂತಿ ಉತ್ಸವದ ಅಂಗವಾಗಿ ಇಂದು ರಾಯರ ಮೂಲ ಬೃಂದಾವನಕ್ಕೆ ಶ್ರೀ ಸುಶಮೀಂದ್ರ ಸ್ವಾಮಿಗಳು ಪಂಚಾಮೃತ ಅಭೀಷೇಕ ನೇರವೇರಿಸಿ ಭಕ್ತರಿಗೆ ಆರ್ಶೀವಚನ ನೀಡಿದರು.
ಮಠದಲ್ಲಿ ವಿವಿಧ ಪವಿತ್ರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ರೋಮಾಂಚನಕಾರಿಯಾದ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು.
ನಂತರ ಶ್ರೀ ಸುಶಮೀಂದ್ರ ಸ್ವಾಮಿಗಳು ಆದ್ಯಾತ್ಮಿಕವಾಗಿ ಉನ್ನತೀಕರಿಸುವ ನಾದಹಾರಂ ಕಾರ್ಯಕ್ರಮ ಉದ್ಘಾಟಿಸಿದರು. ಈ ನಾದಹಾರಂ ಕಾರ್ಯಕ್ರಮದಲ್ಲಿ ನೂರಾರು ಸಂಗೀತಗಾರರು ಭಗವಂತನ ಮತ್ತು ಶ್ರೀ ರಾಯರ ಸಂಕೀರ್ತನೆಗಳನ್ನು ಏಕಕಾಲಕ್ಕೆ ಹಾಡಿದರು.
ನಾದಹಾರಂ ಕಾರ್ಯಕ್ರಮದಲ್ಲಿ ಸೇರಿದ ಸಾವಿರಾರು ಜನರು ಸಂಗೀತಕ್ಕೆ ತಲೆದೂಗಿದರು.
ನಂತರ ಶ್ರೀಗಳು ರಾಯರು ರಥೋತ್ಸವಕ್ಕೆ ಚಾಲನೆ ನೀಡಿದರು. ನವರತ್ನ ರಥದಲ್ಲಿ ರಾಯರ ಚಿನ್ನದ ಪ್ರತಿಮೆಯನ್ನು ಭಕ್ತಿಪೂರ್ವಕವಾಗಿ ಇರಿಸಲಾಗಿತ್ತು. ಮಠದ ಪ್ರಾಂಗಣದಲ್ಲಿ ರಥೋತ್ಸವವನ್ನುಅದ್ದೂರಿಯಾಗಿ ನಡೆಸಲಾಯಿತು. ವಿವಿಧ ಜಿಲ್ಲೆಗಳಿಂದ ರಾಯರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ನದಿಯಲ್ಲಿ ಪುಣ್ಯ ಸ್ನಾನ ಮಾಡಿ ರಾಯರ ದರ್ಶನ ಮಾಡಿ ಭಕ್ತರು ಪುನಿತರಾದರು.