LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
National News

ವಿರಾಟ್ ಕೊಹ್ಲಿ - ರೋಹಿತ್ ಶರ್ಮಾ ಸೆಂಡಾಫ್ ಗೆ ನಾವು ಸಿದ್ಧ ಎಂದ ಕ್ರಿಕೆಟ್ ಆಸ್ಟ್ರೇಲಿಯಾ!

ವಿರಾಟ್ ಕೊಹ್ಲಿ - ರೋಹಿತ್ ಶರ್ಮಾ ಸೆಂಡಾಫ್ ಗೆ ನಾವು ಸಿದ್ಧ ಎಂದ ಕ್ರಿಕೆಟ್ ಆಸ್ಟ್ರೇಲಿಯಾ!

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಿವೃತ್ತಿ ವಿಚಾರವಾಗಿ ಬಿಸಿಸಿಐ ಮತ್ತು ಈ ಬಗ್ಗೆ ಮಧ್ಯೆ ಏನು ಮಾತುಕತೆ ನಡೆದಿದೆಯೋ ತಿಳಿದಿಲ್ಲ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಮಾತ್ರ ಭಾರತ ತಂಡದ ಇಬ್ಬರು ಸ್ಟಾರ್ ಆಟಗಾರರಾಗೆ ಬೀಳ್ಕೊಡುಗೆ ನೀಡಲು ಸಿದ್ಧವಾಗಿದೆ. ಭಾರತ ತಂಡದ ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ತೆರಳಲಿದ್ದು ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ಇದು ಕೊಹ್ಲಿ ಮತ್ತು ರೋಹಿತ್‌ಗೆ ಕೊನೆಯ ಅಂತಾರಾಷ್ಟ್ರೀಯ ಸರಣಿಯಾಗಬಹುದು ಎಂಬ ಅನುಮಾನ ಇದೆ.

ಹೈಲೈಟ್ಸ್‌:
ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾ ಪ್ರವಾಸ ತೆರಳಲಿರುವ ಟೀಂ ಇಂಡಿಯಾ
ಮೂರು ಏಕದಿನ ಮತ್ತು ಐದು ಅಂತಾರಾಷ್ಟ್ರೀಯ ಟಿ20 ಪಂದ್ಯಗಳ ಸರಣಿ ಆಯೋಜನೆ
ಇದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಕೊನೆಯ ಏಕದಿನ ಸರಣಿ ಎಂಬ ಅನುಮಾನ
ಅದು ನಿಜವಾಗಿದ್ದರೆ ಶ್ರೇಷ್ಠ ಕ್ರಿಕೆಟಿಗರಿಗೆ ನಾವು ಬೀಳ್ಕೊಡುಗೆ ನೀಡಲು ಸಿದ್ಧ ಎಂದ ಕ್ರಿಕೆಟ್ ಆಸ್ಟ್ರೇಲಿಯಾ

 

ಭಾರತ ಕ್ರಿಕೆಟ್ ತಂಡವು ಇದೇ ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲಿದ್ದು ಮೂರು ಏಕದಿನ ಮತ್ತು ಐದು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಲಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಈ ಸರಣಿಯಲ್ಲಿ ಆಡಲಿದ್ದು ಇದು ಬಹುಶಃ ಅವರ ಕೊನೆಯ ಏಕದಿನ ಸರಣಿಯಾಗಿರಬಹುದು ಎಂದೇ ಹೇಳಲಾಗುತ್ತಿದೆಆಸ್ಟ್ರೇಲಿಯಾ ಕ್ರಿಕೆಟ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಟಾಡ್ ಗ್ರೀನ್‌ಬರ್ಗ್ ಅವರು ಮಾತನಾಡಿ, ಇದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಕೊನೆಯ ಸರಣಿಯಾಗಿರಬಹುದು. ಆದರೆ ಈ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಇದು ಕೊನೆಯ ಬಾರಿಗೆ ಆಗಿದ್ದರೆ, ಅವರಿಗೆ ಉತ್ತಮವಾದ ಬೀಳ್ಕೊಡುಗೆ ನೀಡಲು ನಾವು ಬಯಸುತ್ತೇವೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅವರು ನೀಡಿದ ಕೊಡುಗೆಯನ್ನು ನಾವು ಗೌರವಿಸುತ್ತೇವೆ" ಎಂದು ಹೇಳಿದರು.
ವರ್ಣಭೇದ ನೀತಿ ಸಹಿಸೊಲ್ಲ
ಇದೇವೇಳೆ ಭಾರತೀಯ ಆಟಗಾರರ ವಿರುದ್ಧದ ವರ್ಣಭೇದ ನೀತಿಯ ಬಗ್ಗೆಯೂ ಅವರು ಮಾತನಾಡಿದರು. ಯಾವುದೇ ರೀತಿಯ ವರ್ಣಭೇದ ನೀತಿಯನ್ನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು. "ನನ್ನ ಸಂದೇಶ ಸರಳವಾಗಿದೆ. ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಸುರಕ್ಷಿತವಾಗಿರಬೇಕು. ಯಾವುದೇ ರೀತಿಯ ವರ್ತನೆ ಕಂಡುಬಂದರೆ, ನಾವು ಅದನ್ನು ಸಹಿಸುವುದಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು.
"ನಮ್ಮ ಭಾರತೀಯ ಅಭಿಮಾನಿಗಳು, ಇಂಗ್ಲಿಷ್ ಅಭಿಮಾನಿಗಳು ಅಥವಾ ಬೇರೆ ಯಾವುದೇ ದೇಶದ ಅಭಿಮಾನಿಗಳು ಇರಲಿ, ಎಲ್ಲರೂ ಸುರಕ್ಷಿತವಾಗಿರಬೇಕು. ತಮ್ಮ ತಂಡವನ್ನು ಬೆಂಬಲಿಸಲು ಅವರಿಗೆ ಅವಕಾಶ ಸಿಗಬೇಕು. ಯಾರೂ ನಿಂದನೆಗೆ ಒಳಗಾಗಬಾರದು. ಯಾರಾದರೂ ಕೆಟ್ಟದಾಗಿ ವರ್ತಿಸಿದರೆ, ಅವರನ್ನು ಕ್ರೀಡಾಂಗಣದಿಂದ ಹೊರಗೆ ಹಾಕಲಾಗುವುದು. ಅಭಿಮಾನಿಗಳಿಗೆ ಶಿಕ್ಷಣ ನೀಡಲು ಮತ್ತು ಗೌರವಯುತ ವಾತಾವರಣವನ್ನು ಸೃಷ್ಟಿಸಲು ನಾವು ಪ್ರಯತ್ನಿಸುತ್ತೇವೆ" ಎಂದು ಭರವಸೆ ನೀಡಿದರು."ಕೆಲವೊಮ್ಮೆ ಜನರು ತಪ್ಪು ಮಾಡಬಹುದು. ಆದರೆ, ನಾವು ಅದನ್ನು ಕ್ಷಮಿಸುವುದಿಲ್ಲ. ಅಂತಹ ವ್ಯಕ್ತಿಗಳನ್ನು ಕ್ರೀಡಾಂಗಣದಿಂದ ಹೊರಗೆ ಹಾಕಲಾಗುವುದು. ಏಕೆಂದರೆ, ಪಂದ್ಯವನ್ನು ವೀಕ್ಷಿಸುವುದು ಒಂದು ಹಕ್ಕು ಅಲ್ಲ, ಅದು ಒಂದು ಸವಲತ್ತು. ನೀವು ಸರಿಯಾಗಿ ವರ್ತಿಸದಿದ್ದರೆ, ನಿಮ್ಮನ್ನು ಸ್ವಾಗತಿಸುವುದಿಲ್ಲ. ಭಾರತೀಯ ಆಟಗಾರರು ಮತ್ತು ಅಭಿಮಾನಿಗಳು, ಮತ್ತು ಎಲ್ಲಾ ದೇಶಗಳ ಅಭಿಮಾನಿಗಳು ನಮ್ಮ ಕ್ರೀಡಾಂಗಣಗಳಲ್ಲಿ ಸುರಕ್ಷಿತವಾಗಿರಬೇಕು ಎಂದು ನಾವು ಬಯಸುತ್ತೇವೆ" ಎಂದು ಗ್ರೀನ್‌ಬರ್ಗ್ ಹೇಳಿದ್ದಾರೆ.ನಿಂದನೆಗೊಳಗಾಗಿದ್ದ ಸಿರಾಜ್
ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದಲ್ಲಿ ವರ್ಣಭೇದ ನೀತಿಯ ಘಟನೆಗಳು ನಡೆದಿದ್ದವು. 2021ರಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರು ವರ್ಣಭೇದ ನಿಂದನೆಗೆ ಒಳಗಾಗಿದ್ದರು. ಜಸ್ಪ್ರೀತ್ ಬುಮ್ರಾ ಕೂಡ ನಿಂದನೆಗೆ ಒಳಗಾಗಿದ್ದರು. ಈ ಬಗ್ಗೆ ಭಾರತ ತಂಡದ ಆಡಳಿತ ಮಂಡಳಿ ದೂರು ದಾಖಲಿಸಿತ್ತುಕಳೆದ ವರ್ಷ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದಾಖಲೆಯ ಪ್ರಮಾಣದಲ್ಲಿ ಟಿಕೆಟ್‌ಗಳು ಮಾರಾಟವಾಗಿದ್ದವು. ಈ ವರ್ಷವೂ ಅದೇ ರೀತಿ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಆಗಸ್ಟ್‌ನಿಂದ ಮಾರ್ಚ್‌ವರೆಗೆ ನಡೆಯುವ ಎಲ್ಲಾ ಪಂದ್ಯಗಳು ಬಹುತೇಕ ಮಾರಾಟವಾಗಬಹುದು. ಈ ಬೇಸಿಗೆಯಲ್ಲಿ ಹಿಂದೆಂದೂ ಕಂಡರಿಯದಂತಹ ಕ್ರಿಕೆಟ್ ನಡೆಯಲಿದೆ. ಭಾರತದಿಂದ ಉತ್ತಮ ಆಟಗಾರರು ಬರಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಕೊನೆಯ ಬಾರಿಗೆ ಆಸ್ಟ್ರೇಲಿಯಾದಲ್ಲಿ ಆಡುತ್ತಿರಬಹುದು.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ