ಕೊಪ್ಪಳ : ಪರಿಸರ ಮಾಲಿನ್ಯ, ಜನರ ಆರೋಗ್ಯದ ಹಿತದೃಷ್ಟಿಯಿಂದ ಬಲ್ಡೋಟಾ ಕಾರ್ಖಾನೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾ ಟಕ್ಕೆ ಒಂದು ವರ್ಷ ಪೂರ್ತಿಯಾದ ಹಿನ್ನೆಲೆಯಲ್ಲಿ ಮಂಗಳವಾರ ಕೊಪ್ಪಳ ಹಾಗೂ ಭಾಗ್ಯನಗರ ಪ್ರದೇಶಗಳಲ್ಲಿ ಕರೆ ನೀಡಿದ್ದ ‘ಸ್ವಯಂಪ್ರೇರಿತ ಬಂದ್’ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮಂಗಳವಾರ
ನಗರದಲ್ಲಿ ಅನೇಕ ವ್ಯಾಪಾರ ಮಳಿಗೆಗಳು, ಹೋಟೆಲ್‍ಗಳು, ಅಂಗಡಿ-ಮುಂಗಟ್ಟುಗಳು, ಬಸ್, ಖಾಸಗಿ ಶಾಲೆ, ಕಾಲೇಜು ಸ್ವಯಂ ಪ್ರೇರಿತವಾಗಿ ಮುಚ್ಚಿ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಒಂದು ವರ್ಷದ ಹೋರಾಟ ಕ್ರಮಕ್ಕೆ ಸರ್ಕಾರದ ಮೌನ : ಕಳೆದ ವರ್ಷ ಫೆಬ್ರವರಿ 24ರಂದು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಪ್ರತಿಭಟನೆ ರ್ಯಾಲಿ ನಡೆದಿತ್ತು. ಸಾವಿರಾರು ಜನರು ಭಾಗವಹಿಸಿದ್ದ ಆ ರ್ಯಾಲಿಯಲ್ಲಿ ಕಾರ್ಖಾನೆಯಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯವನ್ನು ತಕ್ಷಣ ನಿಯಂತ್ರಿಸಲು ಹಾಗೂ ಶಾಶ್ವತ ಪರಿಹಾರ ಕಂಡುಹಿಡಿಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿತ್ತು. ಒಂದು ವರ್ಷ ಕಳೆದರೂ ಸರ್ಕಾರದಿಂದ ಯಾವುದೇ ದೃಢವಾದ ಕ್ರಮ ಕೈಗೊ ಳ್ಳಲಾಗಿಲ್ಲ ಎಂಬ ಆರೋಪ ಹೋರಾಟಗಾರರಿಂದ ಕೇಳಿಬಂದಿದೆ. ಈ ಹಿನ್ನೆಲೆ, ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ಧರಣಿ, ಉಪವಾಸ ಸತ್ಯಾಗ್ರಹ, ಜಾಗೃತಿ ಸಭೆಗಳು ನಡೆಯುತ್ತಿವೆ. ಪರಿಸರ ಹಾಗೂ ಆರೋಗ್ಯದ ಆತಂಕ ಕಾರ್ಖಾನೆಯಿಂದ ಹೊರಬ ರುತ್ತಿರುವ ಧೂಳು, ಹೊಗೆ ಮತ್ತು ರಾಸಾಯನಿಕ ಅವಶೇಷಗಳು ವಾಯುಮಾಲಿನ್ಯ ಹೆಚ್ಚಿಸುತ್ತಿದ್ದು, ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಉಸಿರಾಟದ ತೊಂದರೆ, ಚರ್ಮ ಸಂಬಂಧಿ ಸಮಸ್ಯೆಗಳು ಹೆಚ್ಚು ತ್ತಿರುವುದಾಗಿ ಸ್ಥಳೀಯರು ಆರೋ ಪಿಸಿದ್ದಾರೆ. ಕೃಷಿ ಭೂಮಿಗಳ ಮೇಲೂ ಪರಿಣಾಮ ಬೀರಿದ್ದು, ಬೆಳೆ ಉತ್ಪಾದನೆ ಕುಸಿದಿದೆ ಎಂಬ ದೂರಿದೆ. ಕುಡಿಯುವ ನೀರಿನ ಮೂಲಗಳ ಮೇಲೂ ಮಾಲಿನ್ಯದ ಪರಿಣಾಮ ಕಾಣಿಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸಂಘಟನೆಗಳ ಒಕ್ಕೂಟ ‘ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ’ ಹಾಗೂ ‘ಪರಿಸರ ಹಿತರಕ್ಷಣಾ ಸಮಿತಿ’ಗಳ ನೇತೃತ್ವದಲ್ಲಿ ಹಲವು ಸಾಮಾಜಿಕ, ರೈತ, ಕಾರ್ಮಿಕ ಹಾಗೂ ವಿವಿಧ ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿವೆ.