LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Local News | State News

ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ವದಂತಿಗಳಿಗೆ ಗವಿಮಠ ಸ್ಪಷ್ಟನೆ

ಕೊಪ್ಪಳ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಉದ್ಘಾಟನೆಗೆ ನೀಡಲಾಗಿರುವ ಆಹ್ವಾನವನ್ನು ಕೊಪ್ಪಳದ ಗವಿಮಠದ ಮಹಾಸಂಸ್ಥಾನದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ತಿರಸ್ಕರಿಸಿದ್ದಾರೆ ಎಂಬ ವದಂತಿಗಳನ್ನು ಗವಿಮಠದ ಮೂಲಗಳು ತಳ್ಳಿಹಾಕಿವೆ.

ಸ್ವಾಮೀಜಿಯವರು ಮೈಸೂರು ದಸರಾ ಉದ್ಘಾಟನೆಯ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ ಎಂದು ಗವಿಮಠ ಸ್ಪಷ್ಟಪಡಿಸಿದೆ.

ಕಳೆದ ಒಂದು ವಾರದಿಂದ ಮೌನವ್ರತದಲ್ಲಿದ್ದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯವರು ಶನಿವಾರ ಮಧ್ಯಾಹ್ನ ಮೌನವ್ರತ ಅಂತ್ಯಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ವಾಮೀಜಿಯವರು ದಸರಾ ಉದ್ಘಾಟನೆಗೆ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಮಠ ತಿಳಿಸಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯವರನ್ನು ಆಹ್ವಾನಿಸಿದ್ದು, ಸ್ವಾಮೀಜಿಯವರು ಆಹ್ವಾನವನ್ನು ಸ್ವೀಕರಿಸಿದ್ದಾರೆ. ದಸರಾ ಮಹೋತ್ಸವವನ್ನು ಗವಿಶ್ರೀಗಳು ಉದ್ಘಾಟಿಸುವುದು ಹೆಮ್ಮೆಯ ವಿಷಯವಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.

ದಸರಾ ಉದ್ಘಾಟನೆಗೆ ನೀಡಿರುವ ಆಹ್ವಾನವನ್ನು ಸ್ವಾಮೀಜಿಯವರು ತಿರಸ್ಕರಿಸಿದ್ದಾರೆ ಎಂಬುದರ ಕುರಿತು ಗವಿಮಠವಾಗಲಿ ಅಥವಾ ಸ್ವಾಮೀಜಿಯವರಾಗಲಿ ಯಾವುದೇ ಅಧಿಕೃತ ಹೇಳಿಕೆ ಅಥವಾ ಪ್ರಕಟಣೆ ನೀಡಿಲ್ಲ. ಹೀಗಾಗಿ ಅನಗತ್ಯ ಗೊಂದಲ ಸೃಷ್ಟಿಸುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಗವಿಮಠ ಮನವಿ ಮಾಡಿದೆ.

ಕೈಗಾರಿಕೆ ವಿಸ್ತರಣೆಗೆ ಅನುಮತಿ ನೀಡದಂತೆ ಆಗ್ರಹ

ಇದೇ ವೇಳೆ, ಜಿಲ್ಲಾ ಉಳಿಸಿ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ಸಮಿತಿಯ ಸಂಚಾಲಕರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ಬಾಲ್ಡೋಟಾ ಸೇರಿದಂತೆ ವಿವಿಧ ಕೈಗಾರಿಕೆಗಳ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಅವರು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ. ಕೈಗಾರಿಕೆಗಳ ವಿಸ್ತರಣೆಯಿಂದ ಉಂಟಾಗಬಹುದಾದ ಪರಿಸರ ಹಾಗೂ ಸ್ಥಳೀಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಾರಿ ಡಿಕ್ಕಿಗೆ ಮಹಿಳೆ ಸ್ಥಳದಲ್ಲೇ ಸಾವು; ಮೂವರಿಗೆ ಗಾಯಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ವದಂತಿಗಳಿಗೆ ಗವಿಮಠ ಸ್ಪಷ್ಟನೆಗ್ರಾಹಕರಿಗೆ ಗುಡ್‌ನ್ಯೂಸ್: 3 ದಿನಗಳ ಬ್ಯಾಂಕ್ ಮುಷ್ಕರ ಮುಂದೂಡಿಕೆವಿಧಾನಸಭೆಯಲ್ಲಿ ಡಿಕೆಶಿ ‘ಎರಡು ಮದುವೆ’ ಹೇಳಿಕೆ; ಶಾಸಕರ ಹೆಸರು ಬಹಿರಂಗಕ್ಕೆ ಆಗ್ರಹ‘₹2,500 ಸಾಲದು, ₹25 ಸಾವಿರ ನೀಡಿ’ಮನೆ ಕಟ್ಟುವವರಿಗೆ ಗುಡ್‌ನ್ಯೂಸ್: ಬಳ್ಳಾರಿಯಲ್ಲಿ ಸೆ.25ರಿಂದ ‘ನಿರ್ಮಾಣ–2026’ ಪ್ರದರ್ಶನಗದಗ ತಾಲೂಕು ಬರ ಪೀಡಿತ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್.ಕೆ. ಪಾಟೀಲ ಎಚ್ಚರಿಕೆ‘ವಿಡಿಯೊ ಎಡಿಟ್ ಮಾಡಿ ಹರಿಬಿಡುವುದು ಬಿಜೆಪಿಯ ನೀಚತಂತ್ರ’: ಶಿವಲಿಂಗೇಗೌಡಪ್ರತಾಪ್ ಸಿಂಹ ವಿರುದ್ಧ FIR: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿಜೋಸ್ ಬಟ್ಲರ್‌ ಹೊಸ ವಿಶ್ವ ದಾಖಲೆ; ಟಿ20ಯಲ್ಲಿ 15,000 ರನ್‌ ಪೂರೈಸಿದ ಮೊದಲ ಬ್ಯಾಟರ್‌