LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Business News

ಗ್ರಾಹಕ ಸ್ನೇಹಿ, ಸಾರ್ವಜನಿಕರ ಉಪಯೋಗಕ್ಕೆ ಠೇವಣಿ ಮೇಳ -ಸುಬ್ರಮಣ್ಯೇಶ್ವರ ಕೋ-ಅಪರೇಟಿವ್ ಬ್ಯಾಂಕ್

ಬೆಂಗಳೂರು: ಶ್ರೀ ಸುಬ್ರಮಣ್ಯೇಶ್ವರ ಕೋ-ಅಪರೇಟಿವ್ ಬ್ಯಾಂಕ್ ನಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಠೇವಣಿ ಮೇಳವನ್ನು, ಅಧ್ಯಕ್ಷರಾದ ಡಿ.ಆರ್.ವಿಜಯಸಾರಥಿ, ಉಪಾಧ್ಯಕ್ಷರಾಗಿ ಡಾ. ಎಂ. ರಂಗಧಾಮಶೆಟ್ಟಿರವರು ಠೇವಣಿ ಮೇಳ ಉದ್ಘಾಟನೆ ಮಾಡಿದರು.

ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಡಿ.ಆರ್.ವಿಜಯಸಾರಥಿರವರು ಮಾತನಾಡಿ ಒಬ್ಬರಿಂದ, ಇನ್ನೂಬ್ಬರಿಗೆ ಸಹಕಾರ ನೀಡುವ ಮೂಲಕ ಆರ್ಥಿಕವಾಗಿ ಸಬಲರಾಗುವುದು ಸಹಕಾರ ತತ್ವ. ಬ್ಯಾಂಕ್ ನಲ್ಲಿ ಎ.ಐ.ತಂತ್ರಜ್ಞಾನ ಆಳವಡಿಲಾಗಿದೆ ಮತ್ತು ಗ್ರಾಹಕರಿಗೆ ಡಿಜಿಟಲ್ ವ್ಯವಸ್ಥೆ ಮೂಲಕ ವಹಿವಾಟು ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರ ಬಳಿ ಹಣವಿದೆ ಅದನ್ನ ಠೇವಣಿಯಾಗಿ ಇಟ್ಟು ಅದರಲ್ಲಿ ಬಡ್ಡಿಯಲ್ಲಿ ಆರ್ಥಿಕವಾಗಿ ಸಬಲರಾಗಬಹುದು ಮತ್ತು ಸದಸ್ಯರಿಗೆ ಅವಶ್ಯಕತೆ ಇರುವಾಗ ಮನೆ ಕಟ್ಟಲು ಹಾಗೂ ವ್ಯಾಸಂಗ ಹಾಗೂ ತುರ್ತುಗಿ ಬೇಕಾದಾಗ ಸಾಲ ಪಡೆದು ಸಂಕಷ್ಟಗಳನ್ನು ದೂರ ಮಾಡಿಕೊಳ್ಳಬೇಕು.

ಠೇವಣಿದಾರರ ಹಿತ ಮತ್ತು ಸಾಲಗಾರರಿಗೆ ಸರಳ, ಸುಲಭವಾಗಿ ಸಾಲ ಸೌಲಭ್ಯ ಬ್ಯಾಂಕ್ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತದೆ.

ಗ್ರಾಹಕರಿಗೆ ಸಾಲ, ಸೌಲಭ್ಯ ನೀಡಲು ಎಲ್ಲ ರೀತಿಯಲ್ಲಿ ಪರಿಶೀಲನೆ ಮಾಡಲಾಗುತ್ತದೆ ಮತ್ತು ಮೂರು ಬಾರಿ ಲೀಗಲ್ ಓಪನಿಯನ್ ಪಡೆಯಲಾಗುತ್ತದೆ ಇದರಿಂದ ಮೋಸ ಹೋಗಲು ಬರುವುದಿಲ್ಲ ಠೇವಣಿದಾರರ ಹಣಕ್ಕೆ ಮೋಸವಾಗುವುದಿಲ್ಲ.

ಶ್ರೀ ಸುಬ್ರಮಣ್ಯೇಶ್ವರ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ಸಾರ್ವಜನಿಕ ವಿಶ್ವಾಸಪಾತ್ರ ಗಳಿಸಿ, ಬೆಂಗಳೂರು ನಗರ 9ಶಾಖೆಗಳಿವೆ.

ಜೂನ್ ಮತ್ತು ಜುಲೈ ತಿಂಗಳ 60ದಿನಗಳ ಕಾಲ ನಮ್ಮ ಬ್ಯಾಂಕ್ ನಲ್ಲಿ ಠೇವಣಿ ಮೇಳ ಆಯೋಜಿಸಲಾಗಿದೆ, ಗ್ರಾಹಕರಿಗೆ ಆಕರ್ಷಕ ಬಡ್ಡಿ ನೀಡಲಾಗುತ್ತಿದೆ.ಈವರೆಗೂ 9 ಬ್ರಾಂಚ್ ಗಳಿದ್ದು ಮುಂಬರು ದಿನಗಳಲ್ಲಿ 15 ಬ್ರಾಂಚ್ ತೆರೆಯುವ ಯೋಜನೆಯನ್ನು ಹಮ್ಮಿಕೊಳಗಿದೆ.

ಚಿಕ್ಕ ಮಕ್ಕಳು 1ವರ್ಷದಿಂದ 2ವರ್ಷದವರಗೆ ಶೇಕಡ 8.00/ರಿಂದ 8.50ರಷ್ಟು ಹಾಗೂ ಹಿರಿಯ ನಾಗರಿಕರಿಗೂ ಶೇಕಡ 8.50 ಬಡ್ಡಿ ನೀಡಲಾಗುತ್ತಿದೆ, ಉಳಿತಾಯ ಖಾತೆಗೆ 2.50ರಷ್ಟು ಮತ್ತು ಒಂದು ತಿಂಗಳಿಂದ ವರ್ಷಕ್ಕೂ ಮೇಲೆ ಠೇವಣಿ ಮಾಡಬಹುದು.

ಗ್ರಾಹಕರ ನೆಚ್ಚಿನ, ಜನಪ್ರಿಯ ಬ್ಯಾಂಕ್ ಶ್ರೀ ಸುಬ್ರಮಣ್ಯೇಶ್ವರ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟಿಡ್ ಬ್ಯಾಂಕ್ ಈ ನಿಟ್ಟಿನಲ್ಲಿ ಠೇವಣಿ ಮೇಳ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು.

ನಿರ್ದೇಶಕರಾದ ವೆಂಕಟಾಚಲಪತಿ ಬಿ.ಎಲ್. ಪಿ. ರುದ್ರಮೂರ್ತಿ, ಎಸ್. ಸತ್ಯಮೂರ್ತಿ, ಎಂ.ಸಿ. ಫಾಲನೇತ್ರ, ಲೋಹಿತ್ ಜಿ. ನಂಜೇಗೌಡ, ಪಿ.ಕೆ. ರವೀಂದ್ರ, ಎನ್. ಮಹಾಲಕ್ಷ್ಮಿ, ಎಚ್. ಮಾರುತಿ, ಅನ್ನಪೂರ್ಣಮ್ಮ, ರಚನಾ ಎಸ್, ಜಯಲಕ್ಷ್ಮಿ ಜಿ. ತೋಟಗೇರ. ಪ್ರಭಾರ ಪ್ರಧಾನ ವ್ಯವಸ್ಥಾಪಕರಾಗಿ ಕೆ.ಎನ್. ಕೃಷ್ಣಯ್ಯ ಶೆಟ್ಟಿ, ಪೂರ್ಣಾವಧಿ ಸಲಹೆಗಾರರಾಗಿ ಬಿ.ಆರ್. ನಾಗರಾಜ್ ಉಪಸ್ಥಿತರಿದ್ದರು

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ