LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
State News

ನೂತನ ರಾಜ್ಯಪಾಲರಾಗಿ ಸುಧಾ ಯಾದವ್‌ ಅಧಿಕಾರ ಸ್ವೀಕಾರ

ಬೆಂಗಳೂರು: ಕರ್ನಾಟಕ ರಾಜ್ಯದ 22 ನೇ ರಾಜ್ಯಪಾಲರಾಗಿ ಡಾ.ಸುಧಾ ಯಾದವ್‌ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಬೆಂಗಳೂರಿನ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ಸುಧಾ ಯಾದವ್‌ ಅವರಿಗೆ ರಾಜ್ಯಪಾಲರ ಹುದ್ದೆಯ ಪ್ರಮಾಣವಚನ ಬೋಧಿಸಿದರು.ಇದರೊಂದಿಗೆ 2021ರ ಜುಲೈ 11ರಿಂದ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಅಧಿಕಾರಾವಧಿ ಅಂತ್ಯಗೊಂಡಿದ್ದು, ಅವರ ಸ್ಥಾನದಲ್ಲಿ ಸುಧಾ ಯಾದವ್‌ ಅವರು ಕಾರ್ಯಭಾರ ವಹಿಸಿಕೊಂಡಿದ್ದಾರೆ.

ಇಂದು ನಡೆದ ಸಮಾರಂಭದಲ್ಲಿ ಸುಧಾ ಯಾದವ್‌ ಅವರು,ಕರ್ನಾಟಕದ ರಾಜ್ಯಪಾಲರಾಗಿ ಸಂವಿಧಾನ ರಕ್ಷಣೆ, ರಾಜ್ಯದ ಜನರಿಗೆ ಸೇವೆ ಸಲ್ಲಿಸುತ್ತೇನೆ. ಕಾನೂನು ಪಾಲನೆ ಮಾಡುತ್ತೇನೆ ಎಂದು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಜವಾಬ್ದಾರಿ ವಹಿಸಿಕೊಳ್ಳುವ ದಸ್ತಾವೇಜುಗಳಿಗೆ ಸಹಿ ಹಾಕಿದರು.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ನಿರ್ಗಮಿತ ರಾಜ್ಯಪಾಲ ಥಾವರ್‌ ಚಂದ್‌ ಗೆಲ್ಹೋಟ್‌, ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೂತನ ರಾಜ್ಯಪಾಲರಿಗೆ ಹೂ ಗುಚ್ಚ ನೀಡಿ ಅಭಿನಂದಿಸಿದರು. ಈ ಸಮಯದಲ್ಲಿ ಥಾವರ್‌ ಚಂದ್‌ ಗೆಲ್ಹೋಟ್‌ ತಮ ಕುರ್ಚಿಯನ್ನು ಹಾಲಿ ರಾಜ್ಯಪಾಲರಿಗೆ ಬಿಟ್ಟುಕೊಟ್ಟರು.

ಅಶ್ವಾರೋಹಿ ದಳದ ಬೆಂಗಾವಲಿನಲ್ಲಿ ತೆರಳಿದ ರಾಜ್ಯಪಾಲರು ಪೊಲೀಸ್‌‍ ಗೌರವ ರಕ್ಷೆಯನ್ನು ಸ್ವೀಕರಿಸಿದರು. ಲೋಕಭವನದ ತಮ ಕಚೇರಿಗೆ ತೆರಳಿ, ಅಧಿಕೃತವಾಗಿ ಕಾರ್ಯಾಬಾರ ಆರಂಭಿಸಿದರು. ಲೋಕಭವನದಲ್ಲಿ ಗಣ್ಯರೊಂದಿಗೆ ನಿಂತು ಫೋಟೋಗೆ ಪೋಸ್‌‍ ನೀಡಿದರು. ನಂತರ ರಾಜ್ಯಪಾಲರು ಉಪಹಾರ ಕೂಟದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂನ ಪೂರ್ಣ ಚರಣಗಳನ್ನು ಹಾಡಲಾಯಿತು. ರಾಷ್ಟ್ರಗೀತೆ ಜನಗಣಮನ ವಾದ್ಯ ನುಡಿಸುವ ಮೂಲಕ ಕಾರ್ಯಕ್ರಮ ಸಮಾರೋಪಗೊಳಿಸಲಾಯಿತು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲೀನಿ ರಜನೀಶ್‌ ಕಾರ್ಯಕ್ರಮ ನಿರೂಪಿಸಿದರು.ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಂಪುಟದ ಸಚಿವರು, ವಿರೋಧ ಪಕ್ಷ ನಾಯಕರಾದ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕರು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮೈಸೂರು ರಾಜ್ಯದಲ್ಲಿ ಆರು ಹಾಗೂ ಏಕೀಕರಣ ಮತ್ತು ಮರು ನಾಮಕರಣದ ಬಳಿಕ ರಚನೆಯಾದ ಕರ್ನಾಟಕ ರಾಜ್ಯದಲ್ಲಿ 16 ರಾಜ್ಯಪಾಲರು ಕೆಲಸ ನಿರ್ವಹಿಸಿದ್ದಾರೆ. ಈವರೆಗೆ ಒಟ್ಟು 21 ರಾಜ್ಯಪಾಲರು ಸೇವೆ ಸಲ್ಲಿಸಿದ್ದು, ಸುಧಾಯಾದವ್‌ ಅವರು 22ನೇ ರಾಜ್ಯಪಾಲರಾಗಿ ಕಾರ್ಯಾಂಭಿಸಿದ್ದಾರೆ.

ಹಿನ್ನೆಲೆ:
ಡಾ. ಸುಧಾ ಯಾದವ್‌ ಅವರು ಕರ್ನಾಟಕದ 2ನೇ ಮಹಿಳಾ ರಾಜ್ಯಪಾಲರಾಗಿ ಅಧಿಕಾರ ಅಲಂಕರಿಸಿದ್ದು, ಈ ಹಿಂದೆ 1999ರಲ್ಲಿ ವಿ.ಎಸ್‌.ರಮಾದೇವಿ ಅವರು ರಾಜ್ಯದ ಮೊದಲ ಮಹಿಳಾ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದರು. ಸುಧಾ ಯಾದವ್‌ ಅವರ ಪತಿ ಸುಖಬೀರ್‌ ಸಿಂಗ್‌ ಯಾದವ್‌ ಅವರು ಗಡಿ ಭದ್ರತಾ ಪಡೆಯ (ಬಿ ಎಸ್‌‍ ಎಫ್‌) ಉಪ ಕಮಾಂಡೆಂಟ್‌ ಆಗಿದ್ದು, 1999ರ ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನಿ ಪಡೆಗಳ ಫಿರಂಗಿ ದಾಳಿಗೆ ಎದುರಾಗಿ ಹೋರಾಡಿ ಹುತಾತ್ಮರಾಗಿದ್ದರು. ಅವರಿಗೆ ಮರಣೋತ್ತರವಾಗಿ ಸೇನಾ ಪದಕ ನೀಡಿ ಗೌರವಿಸಲಾಗಿತ್ತು.

ಉನ್ನತ ಶಿಕ್ಷಣ ಹಾಗೂ ಸಾಧನೆ:
ಸುಧಾ ಯಾದವ್‌ ಅವರು ಐಐಟಿ ರೂರ್ಕಿಯಲ್ಲಿ ರಸಾಯನಶಾಸ್ತ್ರ ವಿಷಯದಲ್ಲಿ ಎಂ.ಎಸ್ಸಿ ಮುಗಿಸಿ ಚಿನ್ನದ ಪದಕ ಗಳಿಸಿದ್ದು, ಪಿಎಚ್‌ ಪದವೀಧರೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆಯಿಂದ ರಾಜಕೀಯ ಪ್ರವೇಶಿಸಿದ ಇವರು, 1999 ರಿಂದ 2004 ರವರೆಗೆ ಹರ್ಯಾಣದ ಮಹೇಂದ್ರಗಢ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿಗೆ ಆಯ್ಕೆಯಾದ 2ನೇ ಮಹಿಳೆ (ಸುಷ್ಮಾ ಸ್ವರಾಜ್‌ ಅವರ ನಂತರ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಉಸ್ತುವಾರಿಯಾಗಿ ಹಾಗೂ ಕೇಂದ್ರ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ರಾಜ್ಯಪಾಲರಾಗಿ ಸುಧಾ ಯಾದವ್‌ ಅಧಿಕಾರ ಸ್ವೀಕಾರಪ್ರತಿ ಕುಟುಂಬಕ್ಕೆ ಒಂದೊಂದು ಸರ್ಕಾರಿ ಉದ್ಯೋಗ; ಹೆಚ್.ಡಿ.ಕುಮಾರಸ್ವಾಮಿ ಹೊಸ ಆಲೋಚನೆಬಳ್ಳಾರಿ: ಕುಡಿಯುವ ನೀರಿನ ಅಭಾವ ತಡೆಗೆ ಜಿಲ್ಲಾಡಳಿತ ಸನ್ನದ್ಧ; ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆಜಮೀರ್‌ ವಿಡಿಯೋ ಹರಿಬಿಟ್ಟಿರಬಹುದು? ಸಿದ್ದರಾಮಯ್ಯ ಆಪ್ತರಿಂದಲೇ ವ್ಯವಸ್ಥಿತ ಸಂಚು: ಎಚ್.ಡಿ. ಕುಮಾರ ಸ್ವಾಮಿರಾಜ್ಯದಲ್ಲಿ ಇನ್ನೂ ಬೇಸಿಗೆ ಆರಂಭವಾಗುವ ಮುನ್ನವೇ ವಿದ್ಯುತ್‌ ಕೊರತೆಯ ಆತಂಕಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ಕಂಬಳ, ತುಳುನಾಡಿನ ಟ್ಯಾಬ್ಲೋ ಈ ಬಾರಿಯ ಮೈಸೂರು ದಸರಾದ ಭಾಗವಾಗಿವೆ: ಸಿಎಂ ಡಿ ಕೆ ಶಿವಕುಮಾರ್ಸಿದ್ದರಾಮಯ್ಯ ಪದಚ್ಯುತಿಗೆ ಡಿಕೆಶಿ, ರಾಕೇಶ್ ಶೆಟ್ಟಿ ಸ್ಟಿಂಗ್ ಸಂಚು: ಹೆಚ್.ಡಿ. ಕುಮಾರಸ್ವಾಮಿ ಅವರ ಗಂಭೀರ ಆರೋಪರಾಜ್ಯದ 226 ತಾಲ್ಲೂಕುಗಳು ಬರಪೀಡಿತ; ₹60 ಸಾವಿರ ಕೋಟಿಗೂ ಅಧಿಕ ನಷ್ಟದ ಅಂದಾಜು : ಡಾ. ಜಿ. ಪರಮೇಶ್ವರ್ರಾಬಕೊವಿ ಹಾಲು ಒಕ್ಕೂಟದಲ್ಲಿ 16.5 ಕೋಟಿ ಅಕ್ರಮದ ಆರೋಪ, ದೂರು ದಾಖಲು