ಬಳ್ಳಾರಿ: ಈ ತಿಂಗಳ 23ರಂದು ನಡೆಯ ಲಿರುವ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಬೆಂಬಲಿತ `ಎನ್‌ಡಿಎ’ ಅಭ್ಯರ್ಥಿ ಶಶಿಲ್ ನಮೋಶಿ ಅವರು ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಲಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳ ಮುಖಂಡರು ನಮೋಶಿ ಪರವಾಗಿ ಎಲ್ಲಾ ತಾಲೂಕುಗಳಲ್ಲಿಯೂ ಜಂಟಿ ಪ್ರಚಾರ ನಡೆಸುವುದಾಗಿ ಎರಡೂ ಪಕ್ಷಗಳ ಧುರೀಣರು ತಿಳಿಸಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಬೆಳಿಗ್ಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ನಾಯ್ಡು, ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಮತ್ತಿತರರು, ನಮ್ಮಲ್ಲಿ ಯಾವುದೇ ಅಭಿಪ್ರಾಯ ಬೇಧ, ಅಸಮಾಧಾನಗಳಿಲ್ಲ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಶಶೀಲ್ ನಮೋಶಿ ಅವರ ಪರವಾಗಿ ವಿಸ್ತçತ ಪ್ರಚಾರ ನಡೆಸಿ, ಶಿಕ್ಷಕಮತಬಾಂಧವರ ಬಳಿ ತೆರಳಿ ಮತಯಾಚಿಸುತ್ತೇವೆ. ಶಿಕ್ಷಕÀರ ಸಮಸ್ಯೆಗಳಿಗೆ ಸ್ಪಂದಿಸುವ ನಮೋಶಿ ಅವರನ್ನು ಮತ್ತೊಂದು ಅವಧಿಗೆ ಆರಿಸಿ ತರುವಂತೆ ಶಿಕ್ಷಕರಿಗೆ ಮನವರಿಕೆ ಮಾಡಿಕೊಟ್ಟು ಬೆಂಬಲಿಸುವAತೆ ಕೋರುತ್ತೇವೆ ಎಂದರು.
ವಿಧಾನ ಪರಿಷತ್ ಚುನಾವಣೆ ಸೇರಿದಂತೆ ಮುಂಬರುವ ಜಿಲ್ಲಾ ತಾಲೂಕು ಪಂಚಾಯಿತಿ ಹಾಗೂ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿಯೂ ಕೂಡಾ, ಬಿಜೆಪಿಯೊಂದಿಗೆ ಸೇರಿಕೊಂಡು ಜೆಡಿಎಸ್ ಸ್ಪರ್ಧಿಸಲಿದೆ. ನಮ್ಮಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ, ಅಸಮಾಧಾನಗಳಿಲ್ಲ ಎಂದು ಮೀನಳ್ಳಿ ತಾಯಣ್ಣ ಹಾಗೂ ಅನಿಲ್‌ನಾಯ್ಡು ಸ್ಪಷ್ಟಪಡಿಸಿದರು.ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಧುರೀಣ, ಮಾಜಿ ಶಾಸಕ ಸೋಮಶೇಖರರೆಡ್ಡಿಯವರು ಮಾತನಾಡಿ, ಪಕ್ಷದ ಹೈಕಮಾಂಡ್ ಆದೇಶ, ಸೂಚನೆಗಳಂತೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಜಂಟಿಯಾಗಿಯೇ ಚುನಾವಣೆ ಎದುರಿಸಲಿವೆ. ಗ್ರಾಮ ಪಂಚಾಯಿತಿ (ಜಿ.ಪಿ)ಯಿಂದ ಹಿಡಿದು ಎಂ.ಪಿ.(ಲೋಕಸಭೆ) ಚುನಾವಣೆವರೆಗೂ ಒಗ್ಗಟ್ಟಿನಿಂದ ಎದುರಿಸಿ ಎನ್‌ಡಿಎ ಗೆಲುವಿಗೆ ಶ್ರಮಿಸಲಾಗುತ್ತದೆ. ಜೊತೆ ಜೊತೆಯಲ್ಲಿಯೇ ಚುನಾವಣೆಗೆ ಹೋಗುತ್ತೇವೆ ಎಂದು ತಿಳಿಸಿದರು.ಎನ್‌ಡಿಎ ಮೈತ್ರಿಕೂಟದಲ್ಲಿ ರಾಜ್ಯಮಟ್ಟದಲ್ಲಿಯೇ ಆಗಲಿ, ಜಿಲ್ಲಾ ಮಟ್ಟದಲ್ಲಿಯೇ ಆಗಲೀ ಯಾವುದೇ ಗೊಂದಲಗಳಿಲ್ಲ. ಅಸಮಾಧಾನ, ಅಭಿಪ್ರಾಯ ಬೇಧಗಳಿಲ್ಲ, ನಾವೆಲ್ಲರೂ ಒಗ್ಗೂಡಿ ಮುನ್ನಡೆಸುತ್ತೇವೆ ಎಂದು ಮುಖಂಡರು ಸ್ಪಷ್ಟವಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.