LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Local News | State News

8 ವರ್ಷದ ಬಾಲಕ: ಪೋಷಕರ ಪತ್ತೆಗೆ ಮನವಿ

ಬಳ್ಳಾರಿ:ದೇವಸ್ಥಾನದ ದರ್ಶನ ಮುಗಿಸಿ ವಾಪಸಾಗುತ್ತಿದ್ದ ವೇಳೆ ಹೊಸಪೇಟೆ ಬಸ್ ನಿಲ್ದಾಣದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಎಂಟು ವರ್ಷದ ಬಾಲಕನೊಬ್ಬ ರಕ್ಷಣೆಯಾಗಿದ್ದು, ಆತನ ಪೋಷಕರ ಪತ್ತೆಗಾಗಿ ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ಮನವಿ ಮಾಡಿದ್ದಾರೆ.
ಬೆಂಗಳೂರು ದಕ್ಷಿಣ ವಲಯದ ಚನ್ನಪಟ್ಟಣ ಮೂಲದ ಕು. ಮಹಾಂತೇಶ್ (ಮಾಂತೇಶ್) ಎಂಬ ಬಾಲಕನು ತನ್ನ ತಾಯಿ ಸಿದ್ದಮ್ಮ ಅವರೊಂದಿಗೆ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಸ್ಥಾನಕ್ಕೆ ಬಂದಿದ್ದನು. ಸೆ.20 ರಂದು ದರ್ಶನ ಮುಗಿಸಿಕೊಂಡು ಮರಳಿ ಊರಿಗೆ ತೆರಳುವಾಗ, ಹೊಸಪೇಟೆ ಬಸ್ ನಿಲ್ದಾಣದಲ್ಲಿ ಚಿಪ್ಸ್ ತರಲೆಂದು ಬಸ್‌ನಿಂದ ಕೆಳಗಿಳಿದಿದ್ದಾನೆ. ಈ ವೇಳೆ ತಾಯಿ ಇದ್ದ ಬಸ್ ತಪ್ಪಿಹೋಗಿದ್ದು, ಬಾಲಕ ಅಳುತ್ತಾ ನಿಲ್ದಾಣದಲ್ಲಿ ಅಲೆದಾಡುತ್ತಿದ್ದಾಗ ಗಮನಿಸಿದ ಸಾರ್ವಜನಿಕರು ಮಕ್ಕಳ ಸಹಾಯವಾಣಿ (1098) ಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಮಕ್ಕಳ ಸಹಾಯವಾಣಿ ಸಿಬ್ಬಂದಿ ಬಾಲಕನನ್ನು ರಕ್ಷಿಸಿದ್ದು, ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ತಾತ್ಕಾಲಿಕ ರಕ್ಷಣೆ ಮತ್ತು ಪೋಷಣೆಗಾಗಿ ಬಳ್ಳಾರಿಯ ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ದಾಖಲಿಸಲಾಗಿದೆ. ಬಾಲಕನು 2ನೇ ತರಗತಿಯಲ್ಲಿ ಓದುತ್ತಿರುವುದಾಗಿ ತಿಳಿಸಿದ್ದು, ಪೋಷಕರ ವಿಳಾಸ ಅಥವಾ ದೂರವಾಣಿ ಸಂಖ್ಯೆ ಸರಿಯಾಗಿ ಗೊತ್ತಿಲ್ಲವೆಂದು ಹೇಳಿದ್ದಾನೆ.
*ಬಾಲಕನ ವಿವರ ಮತ್ತು ಚಹರೆ:*
ಪೋಷಕರು: ತಂದೆ-ದಿವಂಗತ ಹುಲುಗಪ್ಪ, ತಾಯಿ- ಸಿದ್ದಮ್ಮ (ಗಾರೆ ಕೆಲಸ)
ವಿಳಾಸ: ಚನ್ನಪಟ್ಟಣ, ಬೆಂಗಳೂರು ದಕ್ಷಿಣ ವಲಯ
ದೈಹಿಕ ಚಹರೆ: ದುಂಡು ಮುಖ, ಸಾಧಾರಣ ಮೈಕಟ್ಟು
ಎತ್ತರ/ತೂಕ: ಎತ್ತರ ಸುಮಾರು 120 ಸೆಂ.ಮೀ, ತೂಕ 20 ಕೆ.ಜಿ.
ಧರಿಸಿರುವ ಬಟ್ಟೆ: ಬಿಳಿ ಬಣ್ಣದ ಮೇಲೆ ನೀಲಿ ಗೆರೆಗಳಿರುವ ಅಂಗಿ ಹಾಗೂ ಕೆಂಪು ಬಣ್ಣದ ಪ್ಯಾಂಟ್
ಮಾನಸಿಕ ಸ್ಥಿತಿ: ಉತ್ತಮವಾಗಿದೆ
ಬಾಲಕನ ಪೋಷಕರು ಅಥವಾ ಸಂಬಂಧಿಕರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ತಕ್ಷಣವೇ ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ, ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಂತಿಧಾಮ ಆವರಣ, ಕಂಟೋನ್ಮೆಂಟ್ (ದಂಡು ಪ್ರದೇಶ), ಬಳ್ಳಾರಿ-583104. ದೂ:08392-242065, ಮೊ:9886555312, 8618825644, 8880466645 ಅಥವಾ ಮಕ್ಕಳ ಸಹಾಯವಾಣಿ: 1098 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಸಕ ರಾಘವೇಂದ್ರ ಹಿಟ್ನಾಳ್ 10 ಸಾವಿರ ಕೋಟಿ ಬಗ್ಗೆ ಶ್ವೇತ ಪತ್ರ ಹೊರಡಿಸಲಿ : ಗಣೇಶ್ ಹೊರತಟ್ನಾಳ್ ಸವಾಲ್8 ವರ್ಷದ ಬಾಲಕ: ಪೋಷಕರ ಪತ್ತೆಗೆ ಮನವಿ"ಪ್ರತಿ ಹೃದಯ ಬಡಿತವೂ ಮಹತ್ವದ್ದು” ಎಂಬ ಧ್ಯೇಯವಾಕ್ಯದೊಂದಿಗೆ ಇ.ಎಸ್.ಐ.ಸಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನಾಚರಣೆಬಸವನ ಬಾಗೇವಾಡಿಯಲ್ಲಿ ಭೂಕಂಪನದಕ್ಷಿಣ ಒಳನಾಡಿನಲ್ಲಿ ಎರಡು ದಿನ ಭಾರೀ ಮಳೆ ನಿರೀಕ್ಷೆ ಕಬ್ಬಿಗೆ ಕನಿಷ್ಠ ₹5,500 ಬೆಂಬಲ ಬೆಲೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಬೃಹತ್‌ ಪ್ರತಿಭಟನೆನೈಸ್‌ ಹಗರಣ 2ಜಿ ಸ್ಪೆಕ್ಟ್ರಮ್‌, ಕಲ್ಲಿದ್ದಲು ಹಗರಣಕ್ಕಿಂತ ದೊಡ್ಡದು: ಎಚ್.ಡಿ. ಕುಮಾರ ಸ್ವಾಮಿಕರ್ನಾಟಕದ ನಕಲಿ ಔಷಧ ಜಾಲಕ್ಕೆ ವಿದೇಶಿ ನಂಟು!ಬಳ್ಳಾರಿ ಹೋಟೆಲ್‌ನಲ್ಲಿ ಬೆಂಕಿ! ತಪ್ಪಿದ ಭಾರೀ ಅನಾಹುತಲಾರಿ ಡಿಕ್ಕಿಗೆ ಮಹಿಳೆ ಸ್ಥಳದಲ್ಲೇ ಸಾವು; ಮೂವರಿಗೆ ಗಾಯ