LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
State News

ಬಸವನ ಬಾಗೇವಾಡಿಯಲ್ಲಿ ಭೂಕಂಪನ

ಬೆಂಗಳೂರು: ವಿಜಯಪುರ ಜಿಲ್ಲೆಯ ಬಸವಣ್ಣನ ಹುಟ್ಟೂರು ಬಸವನಬಾಗೇವಾಡಿ ತಾಲೂಕಿನಲ್ಲಿ 3.5 ತೀವ್ರತೆಯ ಭೂಕಂಪ ಉಂಟಾಗಿರುವುದಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಅಧಿಕೃತ ವೆಬ್‌ಸೈಟ್‌ನಲ್ಲಿ ದಾಖಲಿಸಿದೆ.

ಮಧ್ಯರಾತ್ರಿ 12:26:12ರ ಹೊತ್ತಿಗೆ ಭೂಕಂಪನ ಸಂಭವಿಸಿದ್ದು, ಅದರ ಕೇಂದ್ರಬಿಂದುವು ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮ ಪಂಚಾಯಿತಿಯಿಂದ ನೈಋತ್ಯಕ್ಕೆ 1.1 ಕಿ.ಮೀ ದೂರದಲ್ಲಿ ಸಂಧಿಸಿದ್ದು, ಈ ನಿರ್ದಿಷ್ಟ ಸ್ಥಳವು ಅಕ್ಷಾಂಶ 16.650ಲಿ ಉತ್ತರ ಮತ್ತು ರೇಖಾಂಶ 76.045ಲಿ ಪೂರ್ವದಲ್ಲಿದೆ. ಭೂಗರ್ಭದಲ್ಲಿ ಅಥವಾ ಸಮುದ್ರದ ಮೇಲ್ಮೈಯಿಂದ ಈ ಸ್ಥಳದ ಆಳವು 10 ಕಿಲೋಮೀಟರ್ ಆಗಿರುವುದಾಗಿ ದಾಖಲಿಸಲಾಗಿದೆ.

ಕೇಂದ್ರಬಿಂದುವಿನಿಂದ ಇತರ ಪ್ರಮುಖ ಸ್ಥಳಗಳ ದೂರ ಹೀಗಿದೆ: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮ ಪಂಚಾಯಿತಿಯಿಂದ ನೈಋತ್ಯಕ್ಕೆ 1.1 ಕಿ.ಮೀ. ಕೇಂದ್ರಬಿಂದುವನ್ನು ಹೊಂದಿರುವ ಈ ಭೂಕಂಪವು ಇಂಗಳೇಶ್ವರ ಗ್ರಾಮ ಪಂಚಾಯಿತಿಯಿಂದ ಪೂರ್ವ-ಆಗ್ನೇಯಕ್ಕೆ 3.0 ಕಿ.ಮೀ., ರಬಿನಾಳ ಗ್ರಾಮದಿಂದ ದಕ್ಷಿಣ-ನೈಋತ್ಯಕ್ಕೆ 5.3 ಕಿ.ಮೀ., ಕಮನ್ಕೇರಿ ಗ್ರಾಮದಿಂದ ಪಶ್ಚಿಮಕ್ಕೆ (W) 5.5 ಕಿ.ಮೀ., ಬಸವನ ಬಾಗೇವಾಡಿ ತಾಲೂಕು ಕೇಂದ್ರದಿಂದ ಈಶಾನ್ಯಕ್ಕೆ 11.5 ಕಿ.ಮೀ. ಹಾಗೂ ವಿಜಯಪುರ ನಗರದಿಂದ ನೈಋತ್ಯಕ್ಕೆ 40.0 ಕಿ.ಮೀ.ವರೆಗೆ ಭೂಕಂಪನ ಕೇಂದ್ರಬಿಂದು ಸಂಧಿಸಿದೆ.

ಭೂಕಂಪ ತೀವ್ರತೆಯ ನಕ್ಷೆಯ ಪ್ರಕಾರ ಗಮನಿಸಲಾದ ತೀವ್ರತೆ ಕಡಿಮೆಯಾಗಿದ್ದು, ಕೇಂದ್ರಬಿಂದುವಿನಿಂದ 50-60 ಕಿ.ಮೀ. ತ್ರಿಜ್ಯದ ವ್ಯಾಪ್ತಿಯವರೆಗೆ ಭೂಕಂಪನ ಅನುಭವ ಉಂಟಾಗಬಹುದು. ತೀವ್ರತೆ ಕಡಿಮೆಯಿರುವುದರಿಂದ ಈ ಭೂಕಂಪ ಸ್ಥಳೀಯವಾಗಿ ಯಾವುದೇ ರೀತಿಯ ಹಾನಿ ಉಂಟುಮಾಡುವುದಿಲ್ಲ. ಆದರೂ ಸ್ಥಳೀಯವಾಗಿ ಭೂಕಂಪನಗಳ ಅನುಭವ ಉಂಟಾಗಬಹುದು. ಕೇಂದ್ರಬಿಂದು ಭೂಕಂಪನ ವಲಯ-III ವ್ಯಾಪ್ತಿಗೆ ಬರುತ್ತದೆ ಮತ್ತು ಟೆಕ್ಟೋನಿಕ್ ನಕ್ಷೆಯ ಪ್ರಕಾರ ಈ ಪ್ರದೇಶದಲ್ಲಿ ಯಾವುದೇ ರಚನಾತ್ಮಕ ಅಸಂಗತತೆಗಳು ಕಂಡುಬಂದಿಲ್ಲ.‌ ದಾಖಲಾದ ಭೂಕಂಪನ ತೀವ್ರತೆ ಮತ್ತು ಪ್ರಮಾಣ ಎರಡೂ ಕಡಿಮೆಯಿರುವುದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಕೆ.ಎಸ್.ಎನ್.ಡಿ.ಎಂ.ಸಿ ನಿರ್ದೇಶಕರು ತಿಳಿಸಿದ್ದಾರೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಸಕ ರಾಘವೇಂದ್ರ ಹಿಟ್ನಾಳ್ 10 ಸಾವಿರ ಕೋಟಿ ಬಗ್ಗೆ ಶ್ವೇತ ಪತ್ರ ಹೊರಡಿಸಲಿ : ಗಣೇಶ್ ಹೊರತಟ್ನಾಳ್ ಸವಾಲ್8 ವರ್ಷದ ಬಾಲಕ: ಪೋಷಕರ ಪತ್ತೆಗೆ ಮನವಿ"ಪ್ರತಿ ಹೃದಯ ಬಡಿತವೂ ಮಹತ್ವದ್ದು” ಎಂಬ ಧ್ಯೇಯವಾಕ್ಯದೊಂದಿಗೆ ಇ.ಎಸ್.ಐ.ಸಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನಾಚರಣೆಬಸವನ ಬಾಗೇವಾಡಿಯಲ್ಲಿ ಭೂಕಂಪನದಕ್ಷಿಣ ಒಳನಾಡಿನಲ್ಲಿ ಎರಡು ದಿನ ಭಾರೀ ಮಳೆ ನಿರೀಕ್ಷೆ ಕಬ್ಬಿಗೆ ಕನಿಷ್ಠ ₹5,500 ಬೆಂಬಲ ಬೆಲೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಬೃಹತ್‌ ಪ್ರತಿಭಟನೆನೈಸ್‌ ಹಗರಣ 2ಜಿ ಸ್ಪೆಕ್ಟ್ರಮ್‌, ಕಲ್ಲಿದ್ದಲು ಹಗರಣಕ್ಕಿಂತ ದೊಡ್ಡದು: ಎಚ್.ಡಿ. ಕುಮಾರ ಸ್ವಾಮಿಕರ್ನಾಟಕದ ನಕಲಿ ಔಷಧ ಜಾಲಕ್ಕೆ ವಿದೇಶಿ ನಂಟು!ಬಳ್ಳಾರಿ ಹೋಟೆಲ್‌ನಲ್ಲಿ ಬೆಂಕಿ! ತಪ್ಪಿದ ಭಾರೀ ಅನಾಹುತಲಾರಿ ಡಿಕ್ಕಿಗೆ ಮಹಿಳೆ ಸ್ಥಳದಲ್ಲೇ ಸಾವು; ಮೂವರಿಗೆ ಗಾಯ