E-PAPER
23 Nov 2026, 06:45:05 PM|
Gold₹12413/gGold24K ₹12,413/g - 22K ₹11,369/gTap for full details
Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | State News

ಬಸವ ಮಂಟಪ’ ಕೃತಿಗೆ ಕುಂವೀ ತೀವ್ರ ವಿರೋಧ

ಬಳ್ಳಾರಿ: 12ನೇ ಶತಮಾನದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದ ಮಹಾನ್ ಮಾನವತಾವಾದಿ ಬಸವಣ್ಣನವರ ಕುರಿತು ಅವಹೇಳನಕಾರಿ ಬರಹಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೇಖಕ ರವಿ ಹಂಜ್ ಅವರು ಬರೆದಿರುವ ‘ಬಸವ ಮಂಟಪ’ ಪುಸ್ತಕದ ವಿರುದ್ಧ ಕಿಡಿಕಾರಿದ ಅವರು, ಬಸವಣ್ಣನವರ ಅಪಮಾನವನ್ನು ಸಮಾಜ ಗಂಭೀರವಾಗಿ ಪರಿಗಣಿಸಿ ಖಂಡಿಸಬೇಕು ಎಂದು ಕರೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಕುಂ. ವೀರಭದ್ರಪ್ಪ, ‘ಬಸವ ಮಂಟಪ’ ಪುಸ್ತಕವು ಆಟಾಟೋಪದ ಬರಹದಂತಿದ್ದು, ಬಸವಣ್ಣನವರ ಆಶಯಗಳಿಗೆ ಮಾತ್ರವಲ್ಲದೆ ಮನುಕುಲದ ಮೂಲ ಮೌಲ್ಯಗಳಿಗೂ ವಿರುದ್ಧವಾಗಿದೆ ಎಂದು ಟೀಕಿಸಿದರು. ಈ ದಶಕದ ಅತ್ಯಂತ ಅನಿಷ್ಟಕರ ಘಟನೆಗಳಲ್ಲಿ ಇದೂ ಒಂದಾಗಿದ್ದು, ಅಕ್ಷರಗಳನ್ನು ಬಳಸಿಕೊಂಡು ಮಹಾನ್ ವ್ಯಕ್ತಿತ್ವವನ್ನು ಅವಹೇಳನ ಮಾಡುವ ಇಂತಹ ಕೃತ್ಯವನ್ನು ‘ಅಕ್ಷರ ವ್ಯಭಿಚಾರ’ ಎಂದು ಕಟುವಾಗಿ ಖಂಡಿಸಿದರು. ಬರವಣಿಗೆ ಎನ್ನುವುದು ಸಮಾಜದಲ್ಲಿ ಜಾಗೃತಿ ಮೂಡಿಸುವ, ಜನರ ಬದುಕಿಗೆ ಬೆಳಕು ನೀಡುವ ಹಾಗೂ ಸತ್ಯ, ನ್ಯಾಯ, ಮಾನವೀಯತೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರಬಲ ಸಾಧನವಾಗಿದೆ. ಆದರೆ, ಅಕ್ಷರಗಳನ್ನು ಬಳಸಿಕೊಂಡು ಸಮಾಜದ ಗೌರವಾನ್ವಿತ ವ್ಯಕ್ತಿತ್ವಗಳಿಗೆ ಅವಮಾನ ಮಾಡುವ ಕೆಲಸ ನಡೆದರೆ ಅದನ್ನು ಸಾಹಿತ್ಯದ ಹೆಸರಿನಲ್ಲಿ ಸಮರ್ಥಿಸಲು ಸಾಧ್ಯವಿಲ್ಲ. ಬಸವಣ್ಣನವರ ಕುರಿತು ಅವಹೇಳನಕಾರಿ ಬರಹಗಳನ್ನು ರಚಿಸುವುದು ಅವರ ವಿಚಾರಧಾರೆ ಮತ್ತು ಸಾಮಾಜಿಕ ಕೊಡುಗೆಗಳನ್ನು ಕುಗ್ಗಿಸುವ ಪ್ರಯತ್ನವಾಗಿದೆ ಎಂದು ಅಭಿಪ್ರಾಯಪಟ್ಟರು. ಬಸವಣ್ಣ ಕೇವಲ ಕರ್ನಾಟಕದ ಸಾಂಸ್ಕøತಿಕ ನಾಯಕನಲ್ಲ, ವಿಶ್ವಗುರು: ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ ಅಥವಾ ಒಂದು ಧರ್ಮಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರು ಇಡೀ ಮನುಕುಲಕ್ಕೆ ಸಮಾನತೆ, ಸಹಬಾಳ್ವೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶ ಸಾರಿದ ವಿಶ್ವಮಾನವ. ಜಾತಿ, ವರ್ಗ, ಮೇಲು-ಕೀಳು ಎಂಬ ಭೇದಭಾವಗಳನ್ನು ತೊಡೆದುಹಾಕಿ ಎಲ್ಲರೂ ಸಮಾನರು ಎಂಬ ತತ್ವವನ್ನು ಪ್ರತಿಪಾದಿಸಿದ ಅವರ ವಿಚಾರಧಾರೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಕುಂವೀ ಹೇಳಿದರು. ಬಸವಣ್ಣನವರಿಲ್ಲದ ಸಮಾಜವನ್ನು ಊಹಿಸಿಕೊ ಳ್ಳಲು ಸಾಧ್ಯವಿಲ್ಲ. ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಮಾತ್ರವಲ್ಲ, ನಿಜವಾದ ವಿಶ್ವಗುರು. ಅವರ ವಚನಗಳು, ಸಾಮಾಜಿಕ ಚಿಂತನೆಗಳು ಹಾಗೂ ಮಾನವೀಯ ಮೌಲ್ಯಗಳು ತಲೆಮಾರುಗಳಿಂದ ಜನರನ್ನು ಪ್ರೇರೇಪಿಸುತ್ತಿವೆ. ಇಂತಹ ಮಹಾನ್ ವ್ಯಕ್ತಿಯ ಕುರಿತು ಅವಹೇಳನಕಾರಿ ಬರಹಗಳನ್ನು ರಚಿಸುವುದನ್ನು ಸಮಾಜ ಮೌನವಾಗಿ ನೋಡಬಾರದು ಎಂದು ಎಚ್ಚರಿಸಿದರು. ಇದು ಲಿಂಗಾಯತ ಸಮುದಾಯದ ವಿಚಾರವμÉ್ಟೀ ಅಲ್ಲ: ಬಸವಣ್ಣನವರ ವಿಚಾರಧಾರೆಗಳನ್ನು ಬಹುತೇಕ ಶ್ರಮಿಕ ಸಮುದಾಯಗಳು ಗೌರವದಿಂದ ಸ್ವೀಕರಿಸಿವೆ. ಅವರ ಕಾಯಕ ತತ್ವ, ಸಮಾನತೆಯ ನಿಲುವು, ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟ ಮತ್ತು ಮಾನವೀಯ ದೃಷ್ಟಿಕೋನ ಇಡೀ ಸಮಾಜಕ್ಕೆ ಅನ್ವಯಿಸುವಂತಹವು. ಹೀಗಾಗಿ ‘ಬಸವ ಮಂಟಪ’ ಪುಸ್ತಕದ ಕುರಿತ ವಿವಾದವನ್ನು ಕೇವಲ ಲಿಂಗಾಯತ ಸಮುದಾಯಕ್ಕೆ ಸೀಮಿತಗೊಳಿಸಿ ನೋಡುವುದು ಸರಿಯಲ್ಲ ಎಂದು ಕುಂವೀ ಅಭಿಪ್ರಾಯಪಟ್ಟರು. ಬಸವಣ್ಣನವರ ಅಪಮಾನವು ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ವಿಚಾರ ಮಾತ್ರವಲ್ಲ; ಅದು ಮನುಕುಲದ ಮೌಲ್ಯಗಳು ಹಾಗೂ ಸಂವಿಧಾನ ಪ್ರತಿಪಾದಿಸುವ ಸಮಾನತೆ, ಸ್ವಾತಂತ್ರ್ಯ, ಘನತೆ ಮತ್ತು ಸಹೋದರತ್ವದ ಆಶಯಗಳಿಗೆ ವಿರುದ್ಧವಾದ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾಹಿತಿಗಳು, ಪ್ರಗತಿಪರರು ಧ್ವನಿ ಎತ್ತಲಿ: ಬಸವಣ್ಣನವರ ವಿಚಾರಧಾರೆಗಳನ್ನು ಗೌರವಿಸುವ ಪ್ರತಿಯೊಬ್ಬರೂ ಈ ಪುಸ್ತಕದ ವಿರುದ್ಧ ಧ್ವನಿ ಎತ್ತಬೇಕು. ಸಾಹಿತಿಗಳು, ಲೇಖಕರು, ಪ್ರಗತಿಪರ ಚಿಂತಕರು, ಸಾಮಾಜಿಕ ಸಂಘಟನೆಗಳು ಹಾಗೂ ಬಸವಣ್ಣನವರ ಅನುಯಾಯಿಗಳು ಇಂತಹ ಕೃತಿಗಳನ್ನು ಖಂಡಿಸುವ ಮೂಲಕ ಸಮಾಜದ ಮೌಲ್ಯಗಳನ್ನು ರಕ್ಷಿಸಬೇಕು. ಬಸವಣ್ಣನವರ ಹೆಸರಿನಲ್ಲಿ ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರುವ ನಾವು, ಅವರ ಅಪಮಾನವಾದಾಗ ಮೌನವಾಗಿರುವುದು ಸರಿಯಲ್ಲ ಎಂಬ ಸಂದೇಶವನ್ನು ಕುಂ. ವೀರಭದ್ರಪ್ಪ ವ್ಯಕ್ತಪಡಿಸಿದರು. ಬಸವಣ್ಣನವರ ತತ್ವ ಮತ್ತು ಆದರ್ಶಗಳು ಸಮಾಜದಲ್ಲಿ ಸದಾ ಜೀವಂತವಾಗಿರಬೇಕು. ಅವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಅಕ್ಷರ ಮತ್ತು ಸಾಹಿತ್ಯದ ಮೂಲಕ ಸಮಾಜ ವನ್ನು ವಿಭಜಿಸುವ ಬದಲು, ಜನರನ್ನು ಒಗ್ಗೂಡಿ ಸುವ ಕೆಲಸವಾಗಬೇಕು. ಬಸವಣ್ಣನವರ ಅಪಮಾ ನವನ್ನು ಸಹಿಸುವುದಿಲ್ಲ, ಅವರ ಘನತೆ ಮತ್ತು ಮಾನವೀಯ ಸಂದೇಶವನ್ನು ಎತ್ತಿಹಿಡಿಯಲು ನಿರಂತರವಾಗಿ ಧ್ವನಿ ಎತ್ತುತ್ತೇವೆ ಎಂದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯೇಂದ್ರಗೆ ಜನಾರ್ಧನ ರೆಡ್ಡಿ ತಿರುಗೇಟುಬಸವ ಮಂಟಪ’ ಕೃತಿಗೆ ಕುಂವೀ ತೀವ್ರ ವಿರೋಧ ಆರನೇ ದಿನಕ್ಕೆ ಕಾಲಿಟ್ಟಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ನೀರಿನ ಮಿತಬಳಕೆಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕರೆರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿಜಯೇಂದ್ರ ಸವಾಲುಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ 12 ಶಾಸಕರಿಗೆ ರಾಜಕೀಯ ಅಧಿಕಾರವಿಶ್ವಗುರು ಬಸವಣ್ಣಗೆ ಅಪಮಾನ: ದೇಶ ತೊರೆಯಲೆತ್ನಿಸಿದ ರವಿಹಂಜ್‌ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂಧನ15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಜನವರಿ 18 ರಿಂದ ಪರೀಕ್ಷೆ ಆರಂಭಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯನಗರಗಳ ಅಭಿವೃದ್ಧಿಗೆ ವಿಶೇಷ ಒತ್ತು: ರಸ್ತೆಗಳಿಗೆ ಹೊಸ ಗ್ರಿಡ್‌ ವ್ಯವಸ್ಥೆ - ಡಿ.ಕೆ. ಶಿವಕುಮಾರ್‌