LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Local News

ಹಲ್ಲೆ ಆರೋಪಕ್ಕೆ ವಿಡಿಯೊದಲ್ಲಿಲ್ಲ ಸಾಕ್ಷ್ಯ: ಎಸ್‍ಪಿ ಸ್ಪಷ್ಟನೆ

ಬಿಜೆಪಿ ಪ್ರ್ರತಿಭಟನೆ ವೇಳೆ ಹಲ್ಲೆ ಆರೋಪ

ಬಳ್ಳಾರಿ: ಮತದಾ ರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಗೆ ಸಂಬಂಧಿ ಸಿದಂತೆ ದಾಖಲಾಗಿ ರುವ ಪ್ರಕರಣಗಳನ್ನು ವಿರೋಧಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ವೇಳೆ ಪೆÇಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಇಲಾ ಖೆಯಿಂದ ಚಿತ್ರೀಕರಿಸಲಾದ ವಿಡಿಯೊ ಪರಿಶೀಲನೆಯಲ್ಲಿ ಯಾವುದೇ ರೀತಿಯ ಹಲ್ಲೆಯ ಸನ್ನಿವೇಶ ಕಂಡುಬಂದಿಲ್ಲ ಎಂದು ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ತಿಳಿಸಿದ್ದಾರೆ. ಎಸ್‍ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಳ್ಳಾರಿ ನಗರದ ಬ್ರೂಸ್‍ಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 205/2026 ಹಾಗೂ ಎಪಿಎಂಸಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 214/2026 ದಾಖಲಾಗಿದ್ದು, ಎರಡೂ ಪ್ರಕರಣಗಳ ಸೂಕ್ಷ್ಮತೆಯನ್ನು ಪರಿಗಣಿಸಿ ಬಳ್ಳಾರಿ ನಗರ ಉಪವಿಭಾಗದ ಡಿವೈಎಸ್‍ಪಿ ಅವರಿಗೆ ತನಿಖೆ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅ.5ರಂದು ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ನಾಯ್ಡು ನೇತೃತ್ವದಲ್ಲಿ ಪಕ್ಷದ ಹಿರಿಯ ಮುಖಂಡರು ಹಾಗೂ ಸುಮಾರು 250ರಿಂದ 300 ಮಂದಿ ಕಾರ್ಯಕರ್ತರು ಪ್ರಕರಣಗಳ ದಾಖಲಾತಿಯನ್ನು ವಿರೋ ಧಿಸಿ ಪೂರ್ವಾನುಮತಿ ಪಡೆಯದೆ ಪ್ರತಿ ಭಟನೆ ನಡೆಸಿದ್ದರು. ಪ್ರತಿಭಟನೆ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ವಿವಿಧ ಪೆÇಲೀಸ್ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿತ್ತು. ರಾಯಲ್ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಪ್ರತಿಭಟನೆ ವೇಳೆ ಪ್ರಕರಣ ದಾಖಲಾಗಿರುವ ಪೆÇಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುವುದಾಗಿ ಮುಖಂಡರು ಹೇಳಿಕೆ ನೀಡಿದ್ದು, ಪೆÇಲೀಸರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರಾಯಲ್ ಸರ್ಕಲ್‍ನಿಂದ ಬ್ರೂಸ್‍ಪೇಟೆ ಪೆÇಲೀಸ್ ಠಾಣೆಯತ್ತ ತೆರಳಲು ಮುಂದಾಗಿದ್ದರು. ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಠಾಣೆಗೆ ಮುತ್ತಿಗೆ ಹಾಕಲು ಮುಂದಾದವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಗಳನ್ನು ಪೆÇಲೀಸ್ ಇಲಾಖೆಯಿಂದ ಚಿತ್ರೀಕರಿಸಲಾಗಿದ್ದು, ಬಳಿಕ ಬಿಜೆಪಿ ಮುಖಂಡರು ಪೆÇಲೀಸರು ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವುದಾಗಿ ತಿಳಿಸಿದ ಎಸ್ಪಿ, ಹಲ್ಲೆ ನಡೆದಿರುವ ಬಗ್ಗೆ ಪೆÇಲೀಸ್ ಠಾಣೆಗೆ ಯಾವುದೇ ವೈದ್ಯಕೀಯ-ಕಾನೂನು ವರದಿ (ಎಂಎಲ್‍ಸಿ) ಸ್ವೀಕೃತವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಲಾಖೆ ಚಿತ್ರೀಕರಿಸಿದ ವಿಡಿಯೊ ಪರಿಶೀಲಿಸಿದಾಗ ಯಾವುದೇ ರೀತಿಯ ಹಲ್ಲೆಯ ಸನ್ನಿವೇಶ ಕಂಡುಬಂದಿಲ್ಲ. ಪೆÇಲೀಸ್ ಠಾಣೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದವರು ಹಾಗೂ ಪ್ರಚೋದನೆ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಾ. ಸುಮನ್ ಡಿ. ಪೆನ್ನೇಕರ್ ತಿಳಿಸಿದ್ದಾರೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಜನಾದ್ರಿ ಶ್ರೀ ಆಂಜನೇಯ ದೇವಸ್ಥಾನ ರಾಜ್ಯ ಸರ್ಕಾರದ ಅಧೀನದ ಆದೇಶಕ್ಕೆ ಹೈಕೋರ್ಟ್ ತಡೆಮೈಕ್ರೋಫೈನಾನ್ಸ್ ಸಂಸ್ಥೆಗಳು ರೈತರಿಗೆ ಕಿರುಕುಳ ನೀಡಿದರೆ ಎಫ್‍ಐಆರ್ ದಾಖಲಿಸಲು ಸೂಚನೆ : ಡಿಸಿಎಂ ಹಲ್ಲೆ ಆರೋಪಕ್ಕೆ ವಿಡಿಯೊದಲ್ಲಿಲ್ಲ ಸಾಕ್ಷ್ಯ: ಎಸ್‍ಪಿ ಸ್ಪಷ್ಟನೆಎಸ್‍ಐಆರ್ ಅನ್ನು ಟೂಲ್‍ಕಿಟ್ ಮಾಡಿಕೊಂಡ ಕಾಂಗ್ರೆಸ್: ಶ್ರೀರಾಮುಲು ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲಬಳ್ಳಾರಿಯಲ್ಲಿ ಎಫ್‌ಐಆರ್‌–ಎಸ್‌ಐಆರ್‌ ಹಗ್ಗಜಗ್ಗಾಟ: ಬಿಜೆಪಿ ಪ್ರತಿಭಟನೆ ವೇಳೆ ಜಿಲ್ಲಾಧ್ಯಕ್ಷರಿಗೆ ಗಾಯದ ಆರೋಪಜನಮನ ಸೆಳೆದ ‘ಪಂಚಮವೇದ ಪ್ರೇಮದ ನಾದ’ಬಳ್ಳಾರಿ: ‘ಪಿ.ಎಂ. ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ' ನೋಂದಣಿ ಶಿಬಿರ‘ಸೇವಾಜ್ಯೋತಿ’ಗೆ ಬಿಜೆಪಿ ರಣಕಹಳೆ ಯಶಸ್ವಿಗೆ ಶಾಸಕ ಜನಾರ್ದನ್‍ರೆಡ್ಡಿ ಕರೆಜನರ ಮನೆ ಬಾಗಿಲಿಗೆ ಸೇವೆ ಒದಗಿಸುವುದು ಸರ್ಕಾರದ ಆಶಯ : ಎಸ್ ಮಧು ಬಂಗಾರಪ್ಪ