LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Local News | State News

ಮೈಕ್ರೋಫೈನಾನ್ಸ್ ಸಂಸ್ಥೆಗಳು ರೈತರಿಗೆ ಕಿರುಕುಳ ನೀಡಿದರೆ ಎಫ್‍ಐಆರ್ ದಾಖಲಿಸಲು ಸೂಚನೆ : ಡಿಸಿಎಂ

ಸಂಡೂರು: ರಾಜ್ಯದಲ್ಲಿ ಕಳೆದ 75 ವರ್ಷಗಳಲ್ಲಿ ಕಾಣದಷ್ಟು ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ರೈತರು ಎದುರಿಸುತ್ತಿರುವ ನೈಜ ಪರಿಸ್ಥಿತಿಯನ್ನು ಕಣ್ಣಾರೆ ಕಂಡು, ಅವರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಸರ್ಕಾರದಿಂದ ಅಗತ್ಯ ನೆರವು ಒದಗಿಸುವ ಉದ್ದೇಶದಿಂದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದಾಗಿ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಹೇಳಿದರು. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಮೆಕ್ಕೆಜೋಳ ಬೆಳೆ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ರೈತರೊಂದಿಗೆ ಅವರು ಸಂವಾದ ನಡೆಸಿ ಮಾತನಾಡಿದರು. ರೈತ ಬಾಂಧವರಿಗೆ ನಮಸ್ಕರಿಸಿ ಮಾತು ಆರಂಭಿಸಿದ ಡಾ. ಜಿ. ಪರಮೇಶ್ವರ ಅವರು, ರಾಜ್ಯದಾದ್ಯಂತ ಅತ್ಯಂತ ಗಂಭೀರವಾದ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿನ ಪೀಳಿಗೆಯ ಬಹುತೇಕ ಜನ ಇಂತಹ ಬರವನ್ನು ತಮ್ಮ ಬದುಕಿನಲ್ಲಿ ನೋಡಿರಲಿಕ್ಕಿಲ್ಲ. ರಾಜ್ಯದ ಯಾವ ಭಾಗವೂ ಸಂಪೂರ್ಣವಾಗಿ ಬರದ ಪರಿಣಾಮದಿಂದ ಹೊರತಾಗಿಲ್ಲ. ಸುಮಾರು 240 ತಾಲೂಕುಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಬರದ ಸಂಕಷ್ಟ ಎದುರಾಗುತ್ತಿದೆ. ರೈತರು ಅತ್ಯಂತ ಕಷ್ಟದಲ್ಲಿದ್ದು, ವಿವಿಧ ಭಾಗಗಳಲ್ಲಿ ಬೆಳೆಯುವ ಜೋಳ, ರಾಗಿ, ಸೂರ್ಯಕಾಂತಿ, ತೊಗರಿ ಸೇರಿದಂತೆ ಬಹುತೇಕ ಬೆಳೆಗಳು ಮಳೆ ಕೊರತೆಯಿಂದ ನಾಶವಾಗಿವೆ ಎಂದು ಹೇಳಿದರು. ಮೈಸೂರು ಭಾಗದ ತಾಲೂಕುಗಳಿಗೆ ಭೇಟಿ ನೀಡಿದಾಗಲೂ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿತ್ತು. ಬಳ್ಳಾರಿ ಭಾಗದ ಹಲಕುಂದಿ ಗ್ರಾಮದಲ್ಲಿ ರೈತರು ಬಿತ್ತಿದ್ದ ತೊಗರಿ ಸಂಪೂರ್ಣ ಹಾನಿಗೀಡಾಗಿರುವುದನ್ನು ಪರಿಶೀಲಿಸಲಾಗಿದೆ. ತೊಗರಿ ಹಾಳಾದ ಬಳಿಕ ಸ್ವಲ್ಪ ಮಳೆ ಬಂದಾಗ ಮತ್ತೆ ಜೋಳ ಬಿತ್ತಿದ ರೈತರಿದ್ದಾರೆ. ಆದರೆ ಜೋಳ ಎರಡು ಎಲೆ ಬರುವಷ್ಟರಲ್ಲಿ ಮತ್ತೆ ಒಣಗಿಹೋಗಿದೆ ಎಂದು ವಿವರಿಸಿದರು. ಬಂಡ್ರಿ ಗ್ರಾಮದಲ್ಲಿ ಮೆಕ್ಕೆಜೋಳದ ಜಮೀನನ್ನು ಪರಿಶೀಲಿಸಿದಾಗ ಬೆಳೆ ಮಳೆ ಕೊರತೆಯಿಂದ ಒಣಗಿರುವುದರ ಜೊತೆಗೆ ಕೀಟಬಾಧೆಯೂ ಉಂಟಾಗಿರುವುದು ಕಂಡುಬಂದಿದೆ. ಬೆಳೆ ರೈತನಿಗೆ ಇಳುವರಿ ನೀಡದ ಸ್ಥಿತಿಯμÉ್ಟೀ ಅಲ್ಲ, ದನಗಳಿಗೆ ಮೇವಾಗಿಯೂ ಬಳಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಡಿಸಿಎಂ ಪರಮೇಶ್ವರ ಅವರು ವಿμÁದಿಸಿದರು. ರೈತರಾದ ನಾಗರಾಜ, ಈಶ್ವರಪ್ಪ ಮತ್ತು ಮೈಲೇಶ ಮಾತನಾಡಿ, ವಲಸೆ ತಡೆಯಲು ನರೇಗಾ ನಿಯಮ ಸಡಿಲಿಸುವಂತೆ, ಸಾಲ ಮತ್ತು ಬಡ್ಡಿ ವಸೂಲಿ ಮಾಡದಂತೆ ಸರ್ಕಾರ ಬ್ಯಾಂಕ್‍ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ, ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ, ಜಾನುವಾರುಗಳಿಗೆ ಮೇವು, ಶಾಶ್ವತ ನೀರಾವರಿ ಯೋಜನೆ ರೂಪಿಸುವಂತೆ ಹಾಗೂ ಬರಕ್ಕೆ ಶಾಶ್ವತ ಪರಿಹಾರ ನೀಡುವ ಯೋಜನೆಗಳನ್ನು ಅನುμÁ್ಠನಕ್ಕೆ ತರುವಂತೆ ಮನವಿ ಮಾಡಿದರು. ರೈತರೊಂದಿಗೆ ನಾನಿದ್ದೇನೆ, ನಮ್ಮ ಸರ್ಕಾರವಿದೆ : ರೈತರ ಅಹವಾಲುಗಳನ್ನು ಆಲಿಸಿದ ಬಳಿಕ ಮಾತನಾಡಿದ ಡಾ.ಜಿ.ಪರಮೇಶ್ವರ ಅವರು, ರಾಜ್ಯದಲ್ಲಿ ಈ ವರ್ಷ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಮತ್ತು ಜಾನುವಾರುಗಳನ್ನು ಈ ಸಂಕಷ್ಟದಿಂದ ಪಾರು ಮಾಡುವುದು ಸರ್ಕಾರದ ಮೊದಲ ಆದ್ಯ ತೆಯಾಗಿದೆ. ಯಾವುದೇ ಕಾರಣಕ್ಕೂ ರೈತರು, ಬಡವರು ಮತ್ತು ಗ್ರಾಮೀಣ ಜನರನ್ನು ಸರ್ಕಾರ ಕೈಬಿಡುವುದಿಲ್ಲ ಎಂದು ಭರವಸೆ ನೀಡಿದರು. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವಿವಿಧ ತಾಲೂಕುಗಳಿಗೆ ಭೇಟಿ ನೀಡಲಾಗುತ್ತಿದ್ದು, ಮುಂದಿನ ಹಂತದಲ್ಲಿ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಿಗೂ ತೆರಳಿ ಒಟ್ಟಾರೆ ಸುಮಾರು 10ರಿಂದ 15 ತಾಲೂಕುಗಳ ಬರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲಾಗುವುದು. ರಾಜ್ಯದ ಅಧಿಕಾರಿಗಳ ಜೊತೆಗೆ ಕೇಂದ್ರ ಸರ್ಕಾರದಿಂದ ದೆಹಲಿಯಿಂದ ಬಂದ ತಂಡಗಳೂ ಈ ಭಾಗಗಳಿಗೆ ಭೇಟಿ ನೀಡಿ ಬರದ ತೀವ್ರತೆಯನ್ನು ಪರಿಶೀಲಿಸಿವೆ ಎಂದು ತಿಳಿಸಿದರು. 50 ಲಕ್ಷ ರೈತರಿಗೆ 2,500ರಂತೆ 1,250 ಕೋಟಿ : ಬೆಳೆ ಕಳೆದುಕೊಂಡ ರೈತರಿಗೆ ತಕ್ಷಣ ಸ್ವಲ್ಪವಾದರೂ ಆರ್ಥಿಕ ನೆರವು ದೊರಕಬೇಕು ಎಂಬ ಉದ್ದೇಶದಿಂದ ಮೊದಲ ಕಂತಾಗಿ ತಲಾ 2,500 ನೀಡಲು ಸರ್ಕಾರ ನಿರ್ಧರಿಸಿದೆ. ಸುಮಾರು 50 ಲಕ್ಷ ರೈತರಿಗೆ ಈ ನೆರವು ನೀಡಬೇಕಾಗಿದ್ದು, ಇದಕ್ಕಾಗಿ ₹1,250 ಕೋಟಿ ಬಿಡುಗಡೆ ಮಾಡಲಾಗಿದೆ. ಸಂಬಂಧಿಸಿದ ಕಡತಗಳಿಗೆ ಅನುಮೋದನೆ ದೊರೆತಿದ್ದು, ಜಿಲ್ಲಾಧಿಕಾರಿಗಳ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದರು. ಬೆಳೆ ವಿಮೆ ರೈತರಿಗೆ ಸಿಗಲೇಬೇಕು; ಕೊಡದಿದ್ದರೆ ಕಂಪನಿಗಳ ವಿರುದ್ಧ ಕ್ರಮ : ಸಂವಾದದ ವೇಳೆ ರೈತ ಈಶ್ವರಪ್ಪ ಅವರು ಬೆಳೆ ವಿಮೆ ಕುರಿತು ಪ್ರಸ್ತಾಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಾ. ಪರಮೇಶ್ವರ ಅವರು, ರೈತರು ಕಟ್ಟಿರುವ ವಿಮೆಗೆ ಅನುಗುಣವಾಗಿ ಪರಿಹಾರ ಹಣ ಸಿಗಲೇಬೇಕು. ವಿಮಾ ಕಂಪನಿಗಳು ರೈತರಿಗೆ ಕೊಡಬೇಕಾದ ಹಣವನ್ನು ನೀಡದಿದ್ದರೆ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಸಂಡೂರು ತಾಲೂಕಿನಲ್ಲಿ ಸುಮಾರು 8,931 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಅವರು ವಿಮೆ ಮಾಡಿಸಿರುವ ಬೆಳೆ, ಬೆಳೆ ಹಾನಿಯ ಪ್ರಮಾಣ ಮತ್ತು ವಿಮಾ ಮೊತ್ತದ ಆಧಾರದ ಮೇಲೆ ಅವರಿಗೆ ಬರಬೇಕಾದ ಪರಿಹಾರವನ್ನು ಲೆಕ್ಕ ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸುಮಾರು 60 ಸಾವಿರ ಕೋಟಿ ನಷ್ಟ; ರಾಜ್ಯದಲ್ಲಿ ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಒಟ್ಟಾರೆ ನಷ್ಟ ಸುಮಾರು 60 ಸಾವಿರ ಕೋಟಿವರೆಗೆ ತಲುಪಿದೆ. ಮೊದಲ ಮೆಮೊರಾಂಡಮ್‍ನಲ್ಲಿ ಸುಮಾರು 117 ತಾಲೂಕುಗಳ ಪರಿಸ್ಥಿತಿಯನ್ನು ಒಳಗೊಂಡು ಸುಮಾರು 40 ಸಾವಿರ ಕೋಟಿ ನಷ್ಟದ ವಿವರವನ್ನು ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ನಂತರ ಇನ್ನಷ್ಟು ತಾಲೂಕುಗಳ ನಷ್ಟವನ್ನು ಸೇರಿಸಿ ಒಟ್ಟಾರೆ ಸುಮಾರು 60 ಸಾವಿರ ಕೋಟಿ ನಷ್ಟ ಅಂದಾಜಿಸಲಾಗಿದೆ ಎಂದರು. ಆದರೆ ರಾಜ್ಯ ಸರ್ಕಾರ 60 ಸಾವಿರ ಕೋಟಿಯನ್ನೇ ಪರಿಹಾರವಾಗಿ ಕೇಳುತ್ತಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಓಆಖಈ ಮಾರ್ಗಸೂಚಿ ಮತ್ತು ಲೆಕ್ಕಾಚಾರದ ಪ್ರಕಾರವೇ ನೆರವು ಕೇಳಲಾಗಿದೆ. ಆ ಲೆಕ್ಕಾಚಾರದಲ್ಲಿ ಸುಮಾರು 8 ಸಾವಿರ ಕೋಟಿ ಪರಿಹಾರಕ್ಕೆ ಅರ್ಹತೆ ಬರುತ್ತಿದ್ದು, ಸುಮಾರು 8-10 ಸಾವಿರ ಕೋಟಿ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ತೀರ್ಮಾನ : ಕೇಂದ್ರದಿಂದ ಬರ ಪರಿಹಾರ ಪಡೆಯಲು ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುವ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ. ಎಲ್ಲ ಪಕ್ಷದವರನ್ನೂ ಕರೆದುಕೊಂಡು ಹೋಗಿ ಕೇಂದ್ರ ಸರ್ಕಾರದ ಮುಂದೆ ರಾಜ್ಯದ ಪರಿಸ್ಥಿತಿಯನ್ನು ವಿವರಿಸಿ, ನ್ಯಾಯಯುತವಾದ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುವುದು ಎಂದರು. ಜಾನುವಾರುಗಳಿಗೆ ಮೇವು; 25 ಕೋಟಿ ಬಿಡುಗಡೆ, ಇನ್ನೂ 33 ಕೋಟಿ : ರೈತರμÉ್ಟೀ ಅಲ್ಲದೆ ಜಾನುವಾರುಗಳ ಪರಿಸ್ಥಿತಿಯನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಮಗೆ ಹಸಿವಾಗಿದೆ, ಬಾಯಾರಿಕೆಯಾಗಿದೆ ಎಂದು ಮನುಷ್ಯ ಮಾತಾಡಬಹುದು. ಆದರೆ ಜಾನುವಾರುಗಳು ತಮ್ಮ ಕಷ್ಟವನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಅವುಗಳಿಗೆ ಹುಲ್ಲು ಮತ್ತು ನೀರು ದೊರಕದ ಪರಿಸ್ಥಿತಿ ಬರಬಾರದು. ಮೇವು ಸಮಸ್ಯೆ ಎದುರಾಗದಂತೆ ಆರಂಭಿಕವಾಗಿ 25 ಕೋಟಿ ಬಿಡುಗಡೆ ಮಾಡಲಾಗಿದೆ. ಮುಂದಿನ ಹಂತದಲ್ಲಿ ಇನ್ನೂ 33 ಕೋಟಿ ಒದಗಿಸಲಾಗುವುದು ಎಂದು ತಿಳಿಸಿದರು. ವಲಸೆ ತಡೆಯಲು ಗ್ರಾಮದಲ್ಲೇ ಹೆಚ್ಚಿನ ಉದ್ಯೋಗ: ಬರದ ಕಾರಣ ಗ್ರಾಮಗಳಿಂದ ಯುವಕರು ಮತ್ತು ಮಧ್ಯವಯಸ್ಕರು ಕೂಲಿ ಅರಸಿ ಹೊರರಾಜ್ಯ, ಹೊರಜಿಲ್ಲೆಗಳಿಗೆ ಗುಳೆ ಹೋಗುತ್ತಿರುವ ಬಗ್ಗೆ ರೈತರು ವ್ಯಕ್ತಪಡಿಸಿದ ಆತಂಕವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಡಾ. ಪರಮೇಶ್ವರ ಹೇಳಿದರು. ಮೈಕ್ರೋಫೈನಾನ್ಸ್ ಕಿರುಕುಳ ನೀಡಿದರೆ ಎಫ್‍ಐಆರ್ ಖಾಸಗಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ರೈತರ ಮನೆಗಳಿಗೆ ಹೋಗಿ ಸಾಲ ವಸೂಲಿಗಾಗಿ ಕಿರುಕುಳ ನೀಡುವಂತಿಲ್ಲ ಎಂದು ಡಾ. ಪರಮೇಶ್ವರ ಎಚ್ಚರಿಸಿದರು. ಯಾವುದೇ ಮೈಕ್ರೋಫೈನಾನ್ಸ್ ಸಂಸ್ಥೆ ರೈತರಿಗೆ ಬೆದರಿಕೆ ಹಾಕುವುದು, ಮನೆಗೆ ನುಗ್ಗುವುದು ಅಥ ವಾ ಕಿರುಕುಳ ನೀಡುವುದು ಕಂಡುಬಂದರೆ ತಕ್ಷಣ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ರೈತರಿಗೆ ತಿಳಿಸಿದರು. ಈ ವಿಚಾರವನ್ನು ಕೃಷಿ ಇಲಾಖೆ ಅಧಿಕಾರಿಗಳು ನಿರಂತರವಾಗಿ ಮಾನಿಟರ್ ಮಾಡಬೇಕು. ಯಾವ ಮೈಕ್ರೋಫೈನಾನ್ಸ್ ಸಂಸ್ಥೆಯವರಾದರೂ ರೈತರಿಗೆ ಕಿರುಕುಳ ನೀಡಿದರೆ ತಕ್ಷಣ ಅವರ ವಿರುದ್ಧ ಎಫ್‍ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಜನಾದ್ರಿ ಶ್ರೀ ಆಂಜನೇಯ ದೇವಸ್ಥಾನ ರಾಜ್ಯ ಸರ್ಕಾರದ ಅಧೀನದ ಆದೇಶಕ್ಕೆ ಹೈಕೋರ್ಟ್ ತಡೆಮೈಕ್ರೋಫೈನಾನ್ಸ್ ಸಂಸ್ಥೆಗಳು ರೈತರಿಗೆ ಕಿರುಕುಳ ನೀಡಿದರೆ ಎಫ್‍ಐಆರ್ ದಾಖಲಿಸಲು ಸೂಚನೆ : ಡಿಸಿಎಂ ಹಲ್ಲೆ ಆರೋಪಕ್ಕೆ ವಿಡಿಯೊದಲ್ಲಿಲ್ಲ ಸಾಕ್ಷ್ಯ: ಎಸ್‍ಪಿ ಸ್ಪಷ್ಟನೆಎಸ್‍ಐಆರ್ ಅನ್ನು ಟೂಲ್‍ಕಿಟ್ ಮಾಡಿಕೊಂಡ ಕಾಂಗ್ರೆಸ್: ಶ್ರೀರಾಮುಲು ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲಬಳ್ಳಾರಿಯಲ್ಲಿ ಎಫ್‌ಐಆರ್‌–ಎಸ್‌ಐಆರ್‌ ಹಗ್ಗಜಗ್ಗಾಟ: ಬಿಜೆಪಿ ಪ್ರತಿಭಟನೆ ವೇಳೆ ಜಿಲ್ಲಾಧ್ಯಕ್ಷರಿಗೆ ಗಾಯದ ಆರೋಪಜನಮನ ಸೆಳೆದ ‘ಪಂಚಮವೇದ ಪ್ರೇಮದ ನಾದ’ಬಳ್ಳಾರಿ: ‘ಪಿ.ಎಂ. ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ' ನೋಂದಣಿ ಶಿಬಿರ‘ಸೇವಾಜ್ಯೋತಿ’ಗೆ ಬಿಜೆಪಿ ರಣಕಹಳೆ ಯಶಸ್ವಿಗೆ ಶಾಸಕ ಜನಾರ್ದನ್‍ರೆಡ್ಡಿ ಕರೆಜನರ ಮನೆ ಬಾಗಿಲಿಗೆ ಸೇವೆ ಒದಗಿಸುವುದು ಸರ್ಕಾರದ ಆಶಯ : ಎಸ್ ಮಧು ಬಂಗಾರಪ್ಪ