LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Local News

ಬಳ್ಳಾರಿಯಲ್ಲಿ ಆರ್‌ಎಸ್‌ಎಸ್ ಆಕರ್ಷಕ ಪಥ ಸಂಚಲನ

ಬಳ್ಳಾರಿ:  ದಸರಾ ಶರನ್ನವರಾತ್ರಿಯ ವಿಜಯದಶಮಿ ಹಬ್ಬದ ಪ್ರಯುಕ್ತ ಬಳ್ಳಾರಿಯಲ್ಲಿಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ವತಿಯಿಂದ ಇಂದು ಆಕರ್ಷಕ ಪಥ ಸಂಚಲನ ಯಶಸ್ವಿಯಾಗಿ ನಡೆಯಿತು. ನೂರಾರು ಜನ ಗಣ ವೇಷಧಾರಿಗಳು, ನಗರದ ಪ್ರಮುಖ ರಸ್ತೆಗಳಲ್ಲಿ, ಸರ್ಕಲ್‍ಗಳ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡು ಶಿಸ್ತಿನಿಂದ ಹೆಜ್ಜೆ ಹಾಕುತ್ತಾ, ಸಾರ್ವಜನಿಕರ ಗಮನ ಸೆಳೆದರು. ನಗರದ ಕಿತ್ತೂರು ರಾಣಿ ಚೆನ್ನಮ್ಮ ಶಾಳೆಯ ಬಳಿಯಿಂದ ಪ್ರಾರಂಭವಾದ ಆರ್‍ಎಸ್‍ಎಸ್ ಕಾರ್ಯಕರ್ತ ಗಣ ವೇಷಧಾರಿಗಳ ಆಕರ್ಷಕ ಮೆರವಣಿಗೆಯು, ಪ್ರಭಾತ್ ಟಾಕೀಸ್ ಹತ್ತಿರದಲ್ಲಿನ ತೇರು ಬೀದಿಯಲ್ಲಿರುವ ಶ್ರೀ ಕೊಟ್ಟೂರು ಸ್ವಾಮಿ ಮಠದವರೆಗೆ ಮೆರವಣಿಗೆ ಸಾಗಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಪ್ರಮುಖರ ನೇತೃತ್ವದಲ್ಲಿ ನಗರದ ಹಾಗೂ ಗ್ರಾಮೀಣ ಭಾಗದ ಅನೇಕರೂ ಸೇರಿದಂತೆ ನೂರಾರು ಜನ ಗಣ ವೇಷದಾರಿ ಸ್ವಯಂ ಸೇವಕರು ಶಿಸ್ತು ಬದ್ಧ ನಡಿಗೆಯೊಂದಿಗೆ ಹೆಜ್ಜೆ ಹಾಕುತ್ತಾ ಮೆರವಣಿಗೆಯ ಉದ್ದಕ್ಕೂ ಸಾಗುತ್ತಿದ್ದುದು ಗೋಚರಿಸಿತು. ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಿಂದ ಆರಂಭವಾದ ಪಥ ಸಂಚಲನವು ಶ್ರೀ ದುರ್ಗಮ್ಮ ಗುಡಿ ರಸ್ತೆ, ಗಡಿಗಿ ಚೆನ್ನಪ್ಪ ವೃತ್ತ, ಮೀನಾಕ್ಷಿ ಸರ್ಕಲ್, ಬೆಂಗಳೂರು ರಸ್ತೆ, ಬ್ರೂಸ್‍ಪೇಟೆ ಸರ್ಕಲ್ ಮೂಲಕ ತೇರು ಬಜಾರ್‍ನಲ್ಲಿ ಸಾಗಿ ಶ್ರೀ ಕೊಟ್ಟೂರುಸ್ವಾಮಿ ಮಠವನ್ನು ತಲುಪಿತು. ರಾಷ್ಟ್ರ ನಿರ್ಮಾಣದ ಸಂಕಲ್ಪ:- ವಿಜಯದಶಮಿ (ದಸರಾ) ಹಬ್ಬದ ಸಂದರ್ಭದಲ್ಲಿ ಆರ್‍ಎಸ್‍ಎಸ್ ವತಿಯಿಂದ ಪ್ರತಿ ವರ್ಷವೂ ಆಕರ್ಷಕ ಪಥ ಸಂಚಲನ ಹಮ್ಮಿಕೊಳ್ಳಲಾಗುತ್ತದೆ. ಸಂಘದ ಸಂಸ್ಥಾಪನಾ ದಿನದ ಮಹತ್ವದ ಹಿನ್ನೆಲೆಯಲ್ಲಿ ರಾಷ್ಟ್ರ ನಿರ್ಮಾಣ ಸಂಕಲ್ಪದೊಂದಿಗೆ ನಡೆಸಲಾದ ಈ ಪಥ ಸಂಚಲನದಲ್ಲಿ ಸ್ವಯಂ ಸೇವಕರು ಗಣ ವೇಷ ಧರಿಸಿ, ಶ್ರದ್ಧೆ, ಶಿಸ್ತಿನಿಂದ ಹೆಜ್ಜೆ ಹಾಕುತ್ತಾರೆ. ದೇಶಭಕ್ತಿ, ರಾಷ್ಟ್ರೀಯ ಐಕ್ಯತೆ ಹಾಗೂ ಸಮಾಜ ಸೇವೆಯ ಸದಾಶಯಗಳೊಂದಿಗೆ, ಭವ್ಯ ಭಾರತ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪವನ್ನು, ಪಥ ಸಂಚಲನದ ಮೂಲಕ ಸಾರಲಾಯಿತು ಎಂದು ತಿಳಿಸಲಾಗಿದೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಪ್ರೈಡ್ ಆಫ್ ಕರ್ನಾಟಕ’ ಟೂರ್: ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸಿ ರೈಲಿಗೆ ಮರು ಚಾಲನೆ; ಏನಿದರ ವಿಶೇಷತೆ?ಕೈ ಕಾಲು ಅಂಗಗಳ ಜೋಡಣೆಯ ಶಿಬಿರ ಯಶಸ್ವಿದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಸಿಎಂ ಡಿಕೆಶಿ ಹುನ್ನಾರ: ಹೆಚ್‌ಡಿಕೆ ಆರೋಪಯುನೆಸ್ಕೋ ತಂಡದಿಂದ ವಿಶ್ವ ಪಾರಂಪರಿಕ ಸ್ಮಾರಕಗಳ ಪರಿಶೀಲನೆಬಳ್ಳಾರಿಯಲ್ಲಿ ಆರ್‌ಎಸ್‌ಎಸ್ ಆಕರ್ಷಕ ಪಥ ಸಂಚಲನಭಾರತದ ರಾಜ್ಯಗಳಲ್ಲಿ ಆಚರಿಸಲಾಗುವ ವಿಭಿನ್ನ ರೀತಿಯ ದಸರಾ ಸಂಭ್ರಮದ ವಿಶೇಷತೆ ಹೇಗಿರುತ್ತೆ?ಮುರಿದು ಬಿದ್ದ ತಡೆಗೋಡೆ, ಹಾನಿಗೊಳಗಾದ ಕಬ್ಬಿಣದ ರೇಲಿಂಗ್‍ಗಳುನೂತನ ರಾಜ್ಯಪಾಲರಾಗಿ ಸುಧಾ ಯಾದವ್‌ ಅಧಿಕಾರ ಸ್ವೀಕಾರಪ್ರತಿ ಕುಟುಂಬಕ್ಕೆ ಒಂದೊಂದು ಸರ್ಕಾರಿ ಉದ್ಯೋಗ; ಹೆಚ್.ಡಿ.ಕುಮಾರಸ್ವಾಮಿ ಹೊಸ ಆಲೋಚನೆಬಳ್ಳಾರಿ: ಕುಡಿಯುವ ನೀರಿನ ಅಭಾವ ತಡೆಗೆ ಜಿಲ್ಲಾಡಳಿತ ಸನ್ನದ್ಧ; ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ