E-PAPER
24 Nov 2026, 06:00:37 PM|
Gold₹12519/gGold24K ₹12,519/g - 22K ₹11,465/gTap for full details
Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bellary

ಜನತಾ ಬಜಾರ್ ಅಧ್ಯಕ್ಷರಾಗಿ ವೆಂಕಟೇಶ್ ಹೆಗಡೆ ಅವಿರೋಧ ಆಯ್ಕೆ

ಉಪಾಧ್ಯಕ್ಷರಾಗಿ ಅಲ್ಲೀಪುರ ವೆಂಕಟಸ್ವಾಮಿ ಆಯ್ಕೆ

ಬಳ್ಳಾರಿ:ಬಳ್ಳಾರಿಯ ಜನತಾ ಬಜಾರ್‍ನ (ಬಿಸಿಸಿಡಬ್ಲ್ಯೂ ಸ್ಟೋರ್ಸ್‍ನ) ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಇಂದು ನಡೆದ ಚುನಾವಣೆಯಲ್ಲಿ, ಹಾಲಿ ನಿರ್ದೇಶಕರು, ನ್ಯಾಯವಾದಿಯೂ ಆಗಿರುವ, ಯುವ ಮುಖಂಡ ವೆಂಕಟೇಶ್ ಹೆಗಡೆ ಅವರು ಅಧ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಂತೆಯೇ ಜನತಾಬಜಾರ್‍ನ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು, ಹಿರಿಯ ನಿರ್ದೇಶಕರಾಗಿರುವ ಅಲ್ಲೀಪುರ ವೆಂಕಟಸ್ವಾಮಿ ಅವರು ಚುನಾಯಿತರಾಗಿದ್ದಾರೆ. ವೆಂಕಟಸ್ವಾಮಿ ಹಾಗೂ ಮತ್ತೋರ್ವ ಹಿರಿಯ ನಿರ್ದೇಶಕರಾಗಿರುವ ಕಾತ್ಯಾಯನಿ ಮರಿದೇವಯ್ಯ ಅವರು ಉಪಾಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿದ್ದರು.

ರಹಸ್ಯ ಮತದಾನ ನಡೆದು ಅಲ್ಲೀಪುರ ವೆಂಕಟಸ್ವಾಮಿಯವರು 9 ಮತಗಳನ್ನು ಪಡೆದು ಜಯಭೇರಿ ಬಾರಿಸಿದರು. ಕಾತ್ಯಾಯನಿ ಮರಿದೇವಯ್ಯ ಅವರು 8 ಮತಗಳನ್ನು ಪಡೆದು. ಒಂದು ಮತದ (ಓಟ್‍ನ) ಅಂತರದಲ್ಲಿ ವೆಂಕಟಸ್ವಾಮಿ ಗೆಲುವು ಸಾಧಿಸಿ, ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಜನತಾ ಬಜಾರ್‍ನ ನೂತನ ಅಧ್ಯಕ್ಷರಾಗಿ ವೆಂಕಟೇಶ್ ಹೆಗಡೆಯವರು ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆಯೇ, ಅವರ ಬೆಂಬಲಿಗರು, ಅಭಿಮಾನಿಗಳು ಜೋರಾಗಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.ಅಂತೆಯೇ ಉಪಾಧ್ಯಕ್ಷರಾಗಿ ಅಲ್ಲೀಪುರ ವೆಂಕಟಸ್ವಾಮಿ ಆಯ್ಕೆಯಾದ ಕೂಡಲೇ, ಅವರ ಬೆಂಬಲಿಗರು, ಸ್ನೇಹಿತರು,ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಜನತಾ ಬಜಾರ್‍ನ ನೂತನ ಅಧ್ಯಕ್ಷ ವೆಂಕಟೇಶ್ ಹೆಗಡೆಯವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಅಧಿಕಾರಾವಧಿ ನಾಲ್ಕು ತಿಂಗಳುಗಳಿದ್ದರೂ, ಸಂಸ್ಥೆಯ ಸಮಗ್ರ, ಸರ್ವತೋಮುಖ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ. ಎಲ್ಲಾ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಜನತಾ ಬಜಾರ್‍ನ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಜನತಾಬಜಾರ್‍ನ ಸರ್ವ ನಿರ್ದೇಶಕರು ನನ್ನ ಮೇಲೆ ಅತೀವ ವಿಶ್ವಾಸ, ನಂಬಿಕೆಗಳನ್ನಿಟ್ಟು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿ, ಜವಾಬ್ದಾರಿ ವಹಿಸಿರುವುದು ಅತೀವ ಸಂತಸ ತಂದಿದೆ. ಅವರ ನಿರೀಕ್ಷೆ ಹುಸಿಯಾಗದಂತೆ ಸಂಸ್ಥೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಜನತಾ ಬಜಾರ್‍ನ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸಂಸ್ಥೆಯ ನಿರ್ದೇಶಕರು, ಸಿಬ್ಬಂದಿ ವರ್ಗ, ಸ್ನೇಹಿತರು ಅಭಿನಂದಿಸಿ, ಶುಭ ಹಾರೈಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST